
ರಾಯಚೂರು : ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಹೊಗೆ ಸೂಸುವ, ಕರ್ಕಶ ಶಬ್ದ ಮಾಡು ಸೈಲನ್ಸರ್‌ಗಳ ನಾಶಪಡಿಸಲಾಯಿತು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಸೈಲನ್ಸರ್‌ಗಳ ಮೇಲೆ ರೋಡ್‌ರೋಲರ್ ಹತ್ತಿಸಿ ನಾಶ ಮಾಡಲಾಯಿತು. ನಂತರ ಸ್ವತ್ತು ಕಳೆದುಕೊಂಡ ವಾರಸುದಾರರಿಗೆ ಸ್ವತ್ತನ್ನು ಹಿಂದುಗಿರುಸುವ ಕಾಯಕ್ರಮ ನಡೆಯಿತು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಮಾತನಾಡಿ, 113 ಸ್ವತ್ತಿನ ಪ್ರಕರಣಗಳಲ್ಲಿ ಒಟ್ಟು 1.79 ಕೋಟಿ ಮೊತ್ತವನ್ನು ರಿಕವರಿ ಮಾಡಲಾಗಿದೆ. ಈ ಬಾರಿ ಹಲವು ಟೀಮ್ ಮಾಡಿ ರಿಕವರಿ ಮಾಡಲಾಗಿದೆ. 14 ಕೇಸ್ ಮಾಡಿ 38ಕೆಜಿ ಒಣ ಮತ್ತು ಹಸಿ ಗಾಂಜಾ ಜಪ್ತಿಪಡಿಸಿಕೊಂಡು 21 ಆರೋಪಿಗಳನ್ನು ಜೈಲಿಗೆ ಕಳಿಸಲಾಗಿದೆ. 8.9ಕೆಜಿ ಚಾಕೋಲೇಟ್ ಗಾಂಜಾ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದರು.




