ಜಿಲ್ಲೆರಾಜಕೀಯರಾಜ್ಯ

ಜ. 19ರಿಂದ 25ರ ವರೆಗೆ ಜಿಲ್ಲೆಯಲ್ಲಿ ರೂಟ್ ಮಾರ್ಚ್: ಎಸ್ ಪಿ ಮಾಹಿತಿ

ಗದಗ: ಜನೇವರಿ 19ರಿಂದ 25ರ ವರೆಗೆ ಜಿಲ್ಲೆಯಾಧ್ಯಂತ ರೂಟ್ ಮಾರ್ಚ್ ನಡೆಸಲು ಆರ್ ಎ ಎಪ್ ತಂಡ ಈಗಾಗಲೇ ನಗರಕ್ಕೆ ಆಗಮಿಸಿದ್ದಾರೆ. ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಜಿಲ್ಲೆಯಾಧ್ಯಂತ ಪ್ರಮುಖ ಸ್ಥಳಗಳಿಗೆ ತೆರಳಿ ಅಲ್ಲಿನ ವಾತಾವರಣದ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಹೊರಗಡೆಯಿಂದ ಕರ್ತವ್ಯಕ್ಕೆ ಬಂದಾಗ ಅಪರಿಚಿತ ಆಗಬಾರದು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮ ಎರ್ಪಡಿಸಲಾಗಿದೆ. ಅವರಿಗೆ ನಮ್ಮ ಜಿಲ್ಲಾ ಪೋಲಿಸ್ ಇಲಾಖೆಯಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಎಸ್ ಪಿ, ಬಿ ಎಸ್ ನೇಮಗೌಡ ಮಾಹಿತಿ ನೀಡಿದರು.

ನಗರದ ಶಹರ ಪೋಲಿಸ್ ಠಾಣೆಯಲ್ಲಿ ಪತ್ರಿಕಾಗೊಷ್ಠಿ ನಡೆಸಿ ಅವರು ಮಾತನಾಡಿದರು. ಸಿ ಆರ್ ಪಿ ಎಪ್ ನ 80ಸೈನಿಕರು ಹಾಗೂ 7ಜನ ಮಹಿಳಾ ಸೈನಿಕರನ್ನು ಆಗಮಿಸಿದ್ದು. ಜಿಲ್ಲೆಯ ಎಲ್ಲ ತಾಲೂಕಗಳಲ್ಲಿ ರೂಟ್ ಮಾರ್ಚ್ ನಡೆಯಲಿದೆ. ಜ. 20ರಂದು ಲಕ್ಷ್ಮೇಶ್ವರ, ಮುಳಗುಂದ, ಜ. 21ರಂದು ನರಗುಂದ, ಜ. 22ರಂದು ಮುಂಡರಗಿ, ಜ. 23ರಂದು ರೋಣ, ಗಜೇಂದ್ರಘಡ, ಜ. 24ರಂದು ಶಿರಹಟ್ಟಿ, ಬೆಟಗೇರಿ, ಜ. 25ರಂದು ಗದಗ ಪೋಲಿಸ್ ಹಾಗೂ ಸಿವಿಲ್ ಪೋಲಿಸ್ ಮದ್ಯ ವ್ಹಾಲಿಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ನಗರದ ಶಹರ ಠಾಣೆಯಿಂದ ರೂಟ್ ಮಾರ್ಚ್ ಆರಂಭವಾಗಿ ಡಿಸಿ ಮೀಲ್ ರೋಡ್, ಜವಳಗಲ್ಲಿ, ಕೆ ಎಚ್ ಪಾಟೀಲ್ ಸರ್ಕಲ್, ಗಂಗಾಪುರ ಪೇಟೆ ಮಾರ್ಗವಾಗಿ ಕೊನೆಗೆ ಶಹರ ಠಾಣೆಯಲ್ಲಿ ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದರು.

ಜಾತಿ ಧರ್ಮಕ್ಕೆ ಒಳಗಾಗದೇ ಪಥಕ್ಕೆ ಒಳಗಾಗದೇ ಕಾರ್ಯಾಚರಣೆ ಮಾಡಲಾಗುವುದು. ಸ್ಥಳಿಯ ಜನತೆಯ ಚಲನ-ವಲನ ತಿಳಿಯಲು ಈ ಕಾರ್ಯಕ್ರಮ ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಉಪರ್ಥಿತರಿದ್ದ ಅಸಿಸ್ಟಂಟ್ ಕಮಾಂಡೆಂಟ್ ಪ್ರದೀಪ್ ಡಿ ಟಿ ತಿಳಿಸಿದರು.

Comments (0)

Your email address will not be published. Required fields are marked *

Back to top button