Freedom TV

ಡಿಕೆಶಿ ಸಿಎಂ ಆಗ್ತಾರೋ, ಇಲ್ವೋ ಎಂದು ಗಿಣಿ ಶಾಸ್ತ್ರ ಕೇಳಿದ ಬಿಜೆಪಿ ಕಾರ್ಯಕರ್ತರು

ಮಂಡ್ಯ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಬಾರಿ ಕುತೂಹಲಕ್ಕೆ ಕಾರಣವಾಗಿದೆ.. ಡಿ.ಕೆ ಶಿವಕುಮಾರ್​​​ ಅವರು ಸಿಎಂ ಆಗ್ತಾರೋ ಇಲ್ಲವೋ ಎಂದು ಮಂಡ್ಯದಲ್ಲಿ ಬಿಜೆಪಿ ನಾಯಕರು ಗಿಣಿ ಶಾಸ್ತ್ರ ಕೇಳುವ ಮೂಲಕ ಡಿಕೆ ಶಿವಕುಮಾರ್​ ಅವರ ಗಿಣಿ ಶಾಸ್ತ್ರ ಕೇಳಿ ಹೇಳಿಕೆಗೆ ಟಕ್ಕರ್​​ ಕೊಟ್ಟಿದ್ದಾರೆ..

ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಬಿಜೆಪಿಯವರು ಗಿಣಿ ಶಾಸ್ತ್ರ ಕೇಳಿ ಎಂದು ಡಿ.ಕೆ ಶಿವಕುಮಾರ್​ ವಾಗ್ದಾಳಿ ನಡೆಸಿದ್ದರು. ಡಿಸಿಎಂ ಅವರ ಹೇಳಿಕೆಗೆ ಖಂಡಿಸಿರುವ ಬಿಜೆಪಿ ಕಾರ್ಯಕರ್ತರು ಗಿಣಿ ಶಾಸ್ತ್ರ ಕೇಳಿ ಡಿಸಿಎಂಗೆ ತಿರುಗೇಟು ಕೊಟ್ಟಿದ್ದಾರೆ..

ಮುಖ್ಯಮಂತ್ರಿ ವಿಚಾರಕ್ಕೆ ಬಿಜೆಪಿಯವರು ಗಿಣಿ ಶಾಸ್ತ್ರ ಕೇಳಿ ಎಂದು ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದರು. ಡಿಕೆಶಿ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು ಗಿಣಿ ಶಾಸ್ತ್ರ ಕೇಳಿ ಡಿಸಿಎಂಗೆ ತಿರುಗೇಟು ನೀಡಿದ್ದಾರೆ. ಗಿಳಿ ಶಾಸ್ತ್ರದಲ್ಲಿ ಎಂ ಬದಲಾಗ್ತಾರಾ? ಅಥವಾ ಅವರೇ ಮುಂದುವರೀತಾರಾ? ಅಂತ ಗಿಳಿ ಶಾಸ್ತ್ರ ಕೇಳಿದ್ದಾರೆ. ಈ ಶಾಸ್ತ್ರದಲ್ಲಿ ಗಿಳಿ ಚೊಂಬಿನ ಚಿತ್ರ ಇರುವ ಕಾರ್ಡನ್ನ ತೆಗೆದಿದ್ದು, ಸಿಎಂ ಸ್ಥಾನದ ಆಕಾಂಕ್ಷಿಗೆ ಚೊಂಬು ಸಿಗಲಿದೆ ಎಂದು ಸೂಚಿಸಿದೆ. ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಲ್ಲ. ಅವರ ಕೈಗೆ ಚೊಂಬು ಎಂದು ಬಿಜೆಪಿ ಕಾರ್ಯಕರ್ತರು ವ್ಯಂಗ್ಯವಾಡಿದ್ದಾರೆ.

ಬಳಿಕ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ಜನರಿಗೆ ಒಳ್ಳೆಯದಾಗುತ್ತಾ ಎಂದು ಶಾಸ್ತ್ರ ಕೇಳಿದ್ದಾರೆ. ಈ ವೇಳೆ ಹೂ ಇರುವ ಕಾರ್ಡ್‌ನ್ನು ಗಿಣಿ ತೆಗೆದಿದೆ. ಸಿದ್ದರಾಮಯ್ಯ ಸಿಎಂ ಆಗಿದ್ರೆ ಜನರ ಕಿವಿಗೆ ಹೂ ಗ್ಯಾರಂಟಿ ಎಂದು ಬಿಜೆಪಿ ಕಾರ್ಯಕರ್ತರು ವಿಡಂಬನೆ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button