ಜಿಲ್ಲೆರಾಜ್ಯಸುದ್ದಿ

ಗಂಡನಿಗೆ ಸುಪಾರಿ ಕೊಟ್ಟು ಕೊಲೆ; 7 ವರ್ಷಗಳ ಬಳಿಕ ಸತ್ಯ ಬೆಳಕಿಗೆ

ಕಲಬುರಗಿ: ಅನೈತಿಕ ಅಂಬಂಧಕ್ಕೆ ಅಡ್ಡಿಯಾದ ಗಂಡನಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ..

ಏಳು ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು, ಕೊಲೆ ಕೇಸ್​ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.. ಕಲಬುರಗಿ ತಾಲೂಕಿನ ಕಣ್ಣಿ ಗ್ರಾಮದ ಬೀರಪ್ಪ ಎಂಬಾತನ ಕೊಲೆಗೆ ಪತ್ನಿ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಬಾರದೆಂದು ಪತಿಯ ಕೊಲೆ ಮಾಡಿಸಲು ಪತ್ನಿ ಶಾಂತಾಬಾಯಿ ಸುಪಾರಿ ನೀಡಿದ್ದರು.

ಇದೀಗ ಬೀರಪ್ಪನ ಹೆಂಡತಿ ಶಾಂತಾಬಾಯಿ ಕೊಲೆಗೆ ಸುಪಾರಿ ನೀಡಿರೋದು ಬೆಳಕಿಗೆ ಬಂದಿದೆ. ಅಸಹಜ ಸಾವು ಎಂದು ಬಿಂಬಿಸಿ ಹೆಂಡತಿ ಮತ್ತು ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಏಳು ವರ್ಷಗಳ ಬಳಿಕ ಅಸಹಜ ಸಾವಿನ ಹಿಂದಿನ ಕೊಲೆ ರಹಸ್ಯ ಬಯಲಾಗಿದೆ. ಸುಪಾರಿ ಕೊಟ್ಟು ಕೊಲೆ ಮಾಡಿಸಿದ ದುಡ್ಡಿನ ವಿಚಾರದ ವಿಡಿಯೋ ಇದೀಗ ವೈರಲ್ ಆಗಿದೆ.

ದುಡ್ಡು ಕೊಡದೆ ಇರೋದಕ್ಕೆ ಕೊಲೆ ಆರೋಪಿ ಪೋನ್‌ನಲ್ಲಿ ಮಾತನಾಡುತ್ತಿರುವ ವೀಡಿಯೋ ವೈರಲ್ ಆಗಿದೆ. ಕೊಲೆ ಆರೋಪಿ ಮಹೇಶ್ ಪೋನ್‌ನಲ್ಲಿ ಮಹಿಳೆ ಜೊತೆ ಮಾತಾಡಿರುವ ವೀಡಿಯೋ ವೈರಲ್ ಆಗಿದ್ದರ ಬೆನ್ನಲ್ಲೇ ಬೀರಪ್ಪ ಸಹೋದರ ಕೊಲೆ ದೂರು ದಾಖಲಿಸಿದ್ದಾರೆ. ಕೊಲೆ ದೂರಿನ ಸಂಬಂಧ ಬೀರಪ್ಪನ ಹೆಂಡತಿ ಶಾಂತಾಬಾಯಿ, ಮಹೇಶ್, ಸುರೇಶ್, ಸಿದ್ದು, ಶಂಕರ್ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

Comments (0)

Your email address will not be published. Required fields are marked *

Back to top button