ಜಾನುವಾರು ಮೇಯಿಸಲು ಹೇರಿರುವ ನಿರ್ಬಂಧ ವಾಪಸ್ ಪಡೆಯಲು ಅರಣ್ಯ ಸಚಿವರಿಗೆ ಮನವಿ

ಯಾದಗಿರಿ : ಅರಣ್ಯ ಪ್ರದೇಶದಲ್ಲಿ ಕುರಿ ಮತ್ತು ಜಾನುವಾರುಗಳು ಮೇಯಿಸಲು ಅರಣ್ಯ ಪ್ರವೇಶ ನಿಷೇಧ ವಾಪಸ್ ಪಡೆದು ಕುರಿಗಾರರ ಹಿತರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಅರಣ್ಯ ಸಚಿವರಿಗೆ ಕುರಿಗಾಹಿಗಳು ಮನವಿ ಮಾಡಿದ್ದಾರೆ..
ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ ನೇತೃತ್ವದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿ, ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮತ್ತು ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂ ಸಿದ್ದರಾಮಯ್ಯ ಅವರಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮನವಿ ಸಲ್ಲಿಸಲಾಯಿತು.
ಬಳಿಕ ಮಾತನಾಡಿದ ಜಿಲ್ಲಾಕುರುಬ ಸಂಘದ ಮುಖಂಡರು ಗ್ರಾಮೀಣ ಭಾಗದ ಕುರಿ ಮತ್ತು ದನಗಾಯಿಗಳು ಅರಣ್ಯ ಪ್ರದೇಶದ ಮೇಲೆ ಅವಲಂಬಿತರಾಗಿದ್ದು, ನಿಷೇಧ ಕಾಯ್ದೆಯು ಕುರಿ, ದನಗಾಯಿಗಳ ಪಾಲಿಗೆ ಮಾರಕವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು,ಸಿಬ್ಬಂದಿಗಳು ಕುರಿ ಗಾಯಗಳ ಮೇಲೆ ನಿರಂತರ ದಬ್ಬಾಳಿಕೆ, ದೌರ್ಜನ್ಯ ಮಾಡುತ್ತಿದ್ದಾರೆ. ಅದನ್ನು ತಡೆದು ಕುರಿ ಮತ್ತು ದನಗಾಯಿಗಳಿಗೆ ಅರಣ್ಯ ಪ್ರದೇಶದಲ್ಲಿ ಮೇಯಿಸಲು ಅನುವು ಮಾಡಿಕೊಡಬೇಕು.ಕುರಿಗಾಯಿಗಳಿಗೆ ಬಂದೂಕು ಲೈಸೆನ್ಸ್ ನೀಡಬೇಕು ಸರ್ಕಾರ ಈ ಕುರಿತು ಆಗಸ್ಟ್ ತಿಂಗಳಲ್ಲಿ ನಡೆಯುವ ಅಧಿವೇಶನದಲ್ಲಿ ಚರ್ಚಿಸಿ ಕುರಿಗಾರರ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೊಳಿುವಂತೆ ಮನವಿ ಮಾಡಿದ್ದರು.
ಮನವಿಗೆ ಸ್ಪಂದಿಸಿ ಪ್ರತಿಕ್ರಿಯಿ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅರಣ್ಯ ಪ್ರದೇಶದಲ್ಲಿ ಕುರಿ ಮತ್ತು ಜಾನುವಾರಗಳ ಮೇಯಿಸುವ ಕುರಿತು ಹೇರಿದ್ದ ನಿರ್ಬಂಧ ಆದೇಶ ಹಿಂಪಡೆದು ಕುರಿ, ದನಗಾಯಿಗಳಿಗೆ ಸರ್ಕಾರ ಅರಣ್ಯ ಪ್ರದೇಶದಲ್ಲಿ ಮೇಯಿಸಲು ಅನುಕೂಲ ಮಾಡಿಕೊಡುವುದರ, ಜೊತೆಗೆ ಕುರಿಗಾಯಿಗಳ ಪ್ರಮುಖ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದರು.




