ಜಿಲ್ಲೆ

ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಪರೇಡ್

ಧಾರವಾಡ: ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ರೌಡಿಶೀಟರ್​ಗಳ ಕಾನೂನು ಉಲ್ಲಂಘನೆ ಕಡಿವಾಣ ಹಾಕುವ ಉದ್ದೇಶದಿಂದ, ಇಂದು ಬೆಳಗ್ಗೆ ಮೂರು ಪೊಲೀಸ್​ ಠಾಣೆಯ ಸಿಬ್ಬಂದಿಗಳು ತಮ್ಮ ಠಾಣೆ ವ್ಯಾಪ್ತಿಯ ರೌಡಿಗಳನ್ನು ಕರೆದುಕೊಂಡು ಬಂದು ಖಡಕ್​​ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಕಂಠಿಗಲ್ಲಿಯಲ್ಲಿ ಕೊಟ್ಟ ಸಾಲ ಕೇಳಲು ಹೋಗಿ ಸಾಲ ಪಡೆದ ತಮ್ಮಣ್ಣಿಗೆ ಯುವಕನೊಬ್ಬ ಚಾಕು ಇರಿದಿದ್ದು, ಇದರಿಂದ ಶಾಂತವಾಗಿದ ಧಾರವಾಡ ಬೆಚ್ಚಿಬಿದಿತ್ತು. ಈ ಹಿನ್ನೆಲೆಯಲ್ಲಿ ಧಾರವಾಡ ಎಸಿಪಿ ಪ್ರಶಾಂತ್​ ಸಿದ್ಧನಗೌಡರ್​ ನೇತೃತ್ವದಲ್ಲಿ ಮೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ರೌಡಿಶೀಟರ್‌ಗಳ ಪೆರೇಡ್ ಮಾಡಲಾಯಿತು.

ಶಹರ ಪೊಲೀಸ್ ಠಾಣೆ  ಇನ್ಸ್​​ಪೆಕ್ಟರ್​​ ನಾಗೇಶ್​, ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸ್​​ಪೆಕ್ಟರ್​​ ಸಂಗಮೇಶ್​ ಹಾಗೂ ಉಪನಗರ ಠಾಣೆ ಇನ್ಸ್​​ಪೆಕ್ಟರ್​​ ದಯಾನಂದ ನೇತೃತ್ವದಲ್ಲಿ ತಮ್ಮ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ರೌಡಿಶೀಟರ್‌ಗಳನ್ನು ಠಾಣೆಗೆ ಕರೆಸಲಾಯಿತು.

ಕರೆತಂದ ರೌಡಿಗಳಿಗೆ ಠಾಣೆಗಳ ಇನ್ಸ್​​ಪೆಕ್ಟರ್​​ ಹಾಗೂ ಎಸಿಪಿಯವರು ಕಾನೂನು ಬಾಹಿರ ಚಟುವಟಿಕೆಗಳಿಂದ ಎಲ್ಲರು ದೂರವಿರಬೇಕು. ಯಾರಾದರೂ ಕಾನೂನು ಉಲ್ಲಂಘನೆ ಮಾಡುತ್ತಿದ್ದರೆ  ಬಿಡುವ ಮಾತಿಲ್ಲ.ಕಾನೂನು ಗೌರವಿಸಿ ಎಲ್ಲರೂ ಬದುಕು ಕಟ್ಟಿಕೊಳ್ಳಿ ಎಂದು ಖಡಕ್ ಎಚ್ಚರಿಕೆ ನೀಡಿದರು.

ಇನ್ನು ರೌಡಿಶೀಟರ್​​ಗಳು ಕೆಲವರು ಸಂಚಾರಿ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ 18 ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದ್ದು, ದಂಡ ಹಾಕಲಾಗಿದೆ. ಒಟ್ಟಿನಲ್ಲಿ ಧಾರವಾಡದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಧಾರವಾಡ ವ್ಯಾಪ್ತಿಯಲ್ಲಿನ ರೌಡಿಶೀಟರ್‌ಗಳಿಗೆ ಪರೇಡ್ ಮಾಡಿ ಪೊಲೀಸ್ ಇಲಾಖೆ ಖಡಕ್ ಎಚ್ಚರಿಕೆ ನೀಡಿದೆ.‌

Comments (0)

Your email address will not be published. Required fields are marked *

Back to top button