ಜಿಲ್ಲೆ

ಹೃದಯಹೀನ ಜಿಲ್ಲಾಡಳಿತ .. ನೀರಿಗಾಗಿ ದಲಿತರ ಹಾಹಾಕಾರ…!

ಯಾದಗಿರಿ : ರಾಜ್ಯದ್ಯಂತ ಧಾರಾಕಾರ ಮಳೆಯಾಗ್ತಿದ್ರೂ ಹಲವು ಜಿಲ್ಲೆಗಳಲ್ಲಿ ಮಾತ್ರ ನೀರಿಗಾಗಿ ಹಾಹಾಕಾರ ಮುಂದುವರೆದಿದೆ. ಯಾದಗಿರಿ ಜಿಲ್ಲೆಯ ದಲಿತ ಕಾಲೋನಿಗಳಲ್ಲಿ, ಇಂದಿಗೂ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.

ವಡಗೇರಾ ತಾಲೂಕಿನ ಐಕೂರು ಗ್ರಾಮದ ದಲಿತ ಕೇರಿಯ ಜನರು, ಶುದ್ಧ ಕುಡಿಯುವ ನೀರು ಸಿಗದೇ ಹೆಣಗಾಡುವಂತಾಗಿದೆ. ಚುನಾವಣೆ ಇದ್ದಾಗಷ್ಟೇ ಕಾಣಿಸಿಕೊಳ್ಳುವ ಶಾಸಕ ಚೆನ್ನಾರೆಡ್ಡಿ, ಅವರ ಮನೆ ಅಥವಾ ಕಚೇರಿ ಬಳಿಗೆ ಹೋಗಿ ನೀರಿನ ಸಮಸ್ಯೆ ಬಗ್ಗೆ ಹೇಳಿದರೆ, ಹಾರಿಕೆ ಒತ್ತರ ನೀಡಿ ಕಳಿಸುತ್ತಿದ್ದಾರೆ. ನೀರಿನ ಸಮಸ್ಯೆ ಬಗೆಹರಿಸಲು ಗ್ರಾಮ ಪಂಚಾಯಿತಿ ಇದೆ. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇದ್ದಾರೆ. ತಾಲೂಕು ಆಡಳಿತ, ಜಿಲ್ಲಾಡಳಿತ ಇದೆ. ಅವರನ್ನು ಹೋಗಿ ಕೇಳಿ ಅಂತಾ ಸಮಸ್ಯೆ ಹೊತ್ತು ಹೋದವರನ್ನು ಸಾಗಾಕುತ್ತಿದ್ದಾರೆ.

ಇನ್ನು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಳಿ ಹೋಗಿ ಕೇಳಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಕಥೆಯೂ ಇಷ್ಟೆ. ಹೀಗಾಗಿ ನಮ್ಮ ಸಮಸ್ಯೆಯನ್ನು ಕೇಳುವವರು ಯಾರಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶೀಘ್ರವೇ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನೀರಿನ ಸಮಸ್ಯೆಗೆ ಪರಿಹರಿಸದಿದ್ದರೆ, ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button