ರಾಜಕೀಯ

ಬಿಜೆಪಿ ಜನಾಕ್ರೋಶ ಯಾತ್ರೆಗೆ ಪ್ರಿಯಾಂಕ್ ಖರ್ಗೆ ಕೆಂಡ

ಕಲಬುರಗಿ: ಬಿಜೆಪಿ ಪಾಳಯದ ಜನಾಕ್ರೋಶ ಯಾತ್ರೆ ಬಗ್ಗೆ, ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಜನಾಕ್ರೋಶ ಯಾತ್ರೆ ಮಾಡ್ತಿರೋದು ಅವರ ಪಕ್ಷದಲ್ಲಿನ ಆಕ್ರೋಶ ಮರೆಮಾಚೋಕೆ. ಜನಾಕ್ರೋಶ ಯಾತ್ರೆಗೆ ಜೆಡಿಎಸ್​​ ಗೈರಾಗಿರೋ ಬಗ್ಗೆಯೂ ಪ್ರತಿಕ್ರಿಯಿಸಿದ್ದು, ಗಂಡ ಹೆಂಡತಿ‌ ಮಧ್ಯೆ ಏನ್ ಆಗಿದೆ ಅಂತ ನಮಗೇನ್ ಗೊತ್ತು. ಅದು ಅವರ ಮನೆ ವಿಚಾರ ಅಂದ್ರು. ಮಾತು ಮುಂದುವರೆಸಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಮತ್ತು ಯತ್ನಾಳ್​ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿಯವರು ಬೆಲೆ ಏರಿಕೆ ಮಾಡಿದ್ರೆ ಮಾಸ್ಟರ್ ಸ್ಟ್ರೈಕ್, ನಾವು ಮಾಡಿದ್ರೆ ಮಾತ್ರ ಹೊರೆಯಾಗುತ್ತಾ?. ಹಾಲಿನ ಬೆಲೆ ಏರಿಕೆ ಮಾಡಿದ್ದು ಯಾರಿಗೆ ಹೋಗುತ್ತೆ ಎಂದು ಪ್ರಶ್ನಿಸಿದ್ದಾರೆ. ಇನ್ನು, ಹಿಂದೂ ಪರ ಇರೋ ವ್ಯಕ್ತಿಯೇ ಮುಂದಿನ ಸಿಎಂ ಆಗೋದು, ಅನ್ನುವ ಯತ್ನಾಳ್ ಹೇಳಿಕೆ ಬಗ್ಗೆ ಗರಂ ಆದ ಪ್ರಿಯಾಂಕ್, ನಾವ್ಯಾರು ಹಿಂದೂ ಪರ ಇಲ್ವಾ? ವಲ್ಲಭಭಾಯಿ ಪಟೇಲ್ ನಂತರ ಅತೀ ಬಲಿಷ್ಟ ಗೃಹ ಮಂತ್ರಿ ಅಮಿತ್ ಶಾ ಅಲ್ವಾ?. ಮೋದಿ – ಶಾ ಡೆಡ್ಲಿ ಕಾಂಬಿನೇಷನ್ ಅಲ್ವಾ? ಅವರ ಕೈಯಲ್ಲಿ ಕೇಂದ್ರ ಸರ್ಕಾರವಿದೆ. ಮುಸ್ಲಿಂ, ದಲಿತ, ಆದಿವಾಸಿಗಳು ಈ ದೇಶದ ನಾಗರೀಕರಲ್ಲ ಅನ್ನೋ ಬಿಲ್ ತರಲಿ. ವಕ್ಫ್​ ರೀತಿ ಬಿಲ್ ಪಾಸ್ ಮಾಡಿಸಲಿ. ಅದನ್ನ ಬಿಟ್ಟು ಸುಮ್ಮನೆ ಮುಸ್ಲಿಮರ ಮೇಲೆ ಆರೋಪ ಮಾಡೋದನ್ನ ಬಿಡಬೇಕು. ಮುಸ್ಲಿಮರು ಈ ದೇಶದ ನಾಗರೀಕರಲ್ಲ ಎನ್ನೋದನ್ನ ಕೇಂದ್ರ ಹೇಳಲಿ ಅಂತಾ ಸವಾಲು ಹಾಕಿದ್ರು.

ಇದೇ ವೇಳೆ ಬಿಜೆಪಿ ಶಾಸಕರನ್ನ ಸ್ಪೀಕರ್ ಉಚ್ಚಾಟನೆ ವಿಚಾರವಾಗಿಯೂ ಮಾತನಾಡಿದ್ದು, ಸ್ಪೀಕರ್ ಪೀಠಕ್ಕೆ ಅದರದ್ದೇ ಆದ ಗೌರವವಿದೆ. ಪೀಠಕ್ಕೆ ಅಗೌರವ ತೋರಿಸೋದು ಸರಿನಾ..? ಅಗೌರವ ತೋರಿದವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕಾ..? ನಾನಾಗಿದ್ರೆ ಇವರನ್ನ ಒಂದು ವರ್ಷ ಉಚ್ಚಾಟನೆ ಮಾಡ್ತಿದ್ದೆ ಎಂದು ಗುಡುಗಿದರು.

Comments (0)

Your email address will not be published. Required fields are marked *

Back to top button