ಜಿಲ್ಲೆ

ಆಪರೇಷನ್​ ಚಿರತೆ ಸಕ್ಸಸ್

ಬೆಂಗಳೂರು: ಆನೇಕಲ್ ತಾಲ್ಲೂಕಿನ ಜಿಗಣಿ ಗ್ರಾಮದಲ್ಲಿ ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದಕ್ಕೂ ಮುನ್ನ ಚಿರತೆ ಮನೆಯ ಒಳಕ್ಕೆ ಬಂದಾಗ ಮನೆಯಲ್ಲೇ ಕೂತಿದ್ದ ವೆಂಕಟೇಶ ಮತ್ತು ವೆಂಕಟ ಲಕ್ಷ್ಮಿ ದಂಪತಿಯ ಸಮಯ ಪ್ರಜ್ಞೆ ದೊಡ್ಡ ಅನಾಹತುವನ್ನ ತಡೆದಿದೆ. ಚಿರತೆ ಮನೆಗೆ ಹೊಕ್ಕುತ್ತಿದ್ದಂತೆ ಭಯಭೀತಿಯಿಂದ ಮನೆಯಿಂದ ಹೊರ ಬಂದು ಬಾಗಿಲು ಲಾಕ್ ಮಾಡಿ ಚಿರತೆಯನ್ನ ಕೂಡಿಹಾಕಿದ್ದಾರೆ. ಸತತ 6 ಗಂಟೆಗಳ ಕಾಲ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಚರಣೆ ಬಳಿಕ ಚಿರತೆಯನ್ನ ಸೆರೆಹಿಡಿದು ಅರಣ್ಯಕ್ಕೆ ತೆಗೆದುಕೊಂಡು ಹೋಗಿದ್ದಾರೆ

ಇಡೀ ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಜಿಗಣಿ ಗ್ರಾಮಸ್ಥ ವೆಂಕಟೇಶ್ ಎಂಬವರ ಮನೆಗೆ ನುಗ್ಗಿತ್ತು. ದಂಪತಿ ಚಿರತೆಯನ್ನ ಮೆನಯೊಳಗೆ ಕೂಡಿಹಾಕಿದ್ದಾರೆ. ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಬಳಿಕ ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ಅಷ್ಟರಲ್ಲಾಗಲೇ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಚಿರತೆ ಸೆರೆ ಹಿಡಿಯುವ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿಯುತ್ತಿದ್ದರು. ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಬೋನ್ ಮತ್ತು ಬಲೆಗಳ ಸಿದ್ಧತೆ ಮಾಡಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ, ಬಳಿಕ ಅರಿವಳಿಕೆ ತಜ್ಞರಿಂದ ಮದ್ದು ಕೊಡಿಸಿ ಚಿರತೆಯನ್ನು ಸೆರೆ ಹಿಡಿಯಲಾಯಿತು

Comments (0)

Your email address will not be published. Required fields are marked *

Back to top button