ಜಿಲ್ಲೆ

ಹಲಾಲ್ ಮುಕ್ತ ಯುಗಾದಿಗೆ ಪ್ರಮೋದ್ ಮುತಾಲಿಕ್ ಕರೆ

ಧಾರವಾಡ: ಯುಗಾದಿ, ರಾಮನವಮಿ ಹಲಾಲ್ ಮುಕ್ತ ಆಗಲಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮನವಿ ಮಾಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಮುಸ್ಲಿಂ ಅವರು ಹಲಾಲ್ ಮಾಡಿಕೊಂಡರೆ ಅದಕ್ಕೆ ನಮ್ಮ ವಿರೋಧ ಇಲ್ಲ. ಆದರೆ,ಅದನ್ನು ಹಿಂದೂಗಳ ಮೇಲೆ ಹೇರುವುದನ್ನು ನಾವು ಒಪ್ಪುವುದಿಲ್ಲ. ಇಸ್ಲಾಂನವರು ಹಲಾಲ್ ಮೂಲಕ ವ್ಯಾಪಾರ ಮಾಡುತ್ತಾರೆ. ಕುಂಕುಮ, ಅರಿಶಿನ, ತೆಂಗಿನಕಾಯಿ, ತಾಳಿ ಇವೆಲ್ಲವನ್ನು ಹಲಾಲ್ ಮೂಲಕ ಮಾರಾಟ ಮಾಡುತ್ತಾರೆ. ಅಂತಹವರ ಬಳಿ ಹಿಂದೂಗಳು ವ್ಯಾಪಾರ ಮಾಡಬಾರದು‌. ಹಿಂದೂಗಳು ಶುದ್ಧ ಮತ್ತು ಪವಿತ್ರ ಇರುವುದನ್ನು ಖರೀದಿ ಮಾಡಿ ದೇವರಿಗೆ ಅರ್ಪಿಸಬೇಕು. ಗೋ ಹಂತಕರ, ಭಕ್ಷಕರ ಜೊತೆ ವ್ಯಾಪಾರ ಮಾಡಿ, ಯುಗಾದಿಯನ್ನು ಹಲಾಲ್ ಮಾಡಬಾರದು. ಮುಸ್ಲಿಂ ವ್ಯಾಪಾರಿಗಳು ವಸ್ತುಗಳ ಮೇಲೆ ಉಗುಳಿ ಹೇಸಿಗೆ ಮಾಡುತ್ತಾರೆ. ಅಂತವರ ಜೊತೆ ನಾವ್ಯಾಕೆ ವ್ಯಾಪಾರ ಮಾಡಬೇಕು? ಅಂತದನ್ನು ತೆಗೆದುಕೊಂಡು ನೈವೇದ್ಯ ಮಾಡುವುದು, ಪೂಜೆ ಮಾಡುವುದು ಸರಿಯಲ್ಲ. ಇದು ಶಾಸ್ತ್ರದ ವಿರುದ್ಧವಾದದ್ದು. ನಮ್ಮ ದೇವರನ್ನು ನಂಬದೇ ಇರುವವರ ಜೊತೆ ನಾವ್ಯಾರೂ ವ್ಯಾಪಾರ ಮಾಡಬಾರದು ಎಂದು ತಿಳಿಸಿದರು.

Comments (0)

Your email address will not be published. Required fields are marked *

Back to top button