ಜಿಲ್ಲೆ
SSLC ಎಕ್ಸಾಂ ದಿನವೇ ತಂದೆ ಸಾವು; ಇದೆಂಥಾ ವಿಧಿಯಾಟ

ಕಲಬುರಗಿ: ಹೃದಯಾಘಾತದಿಂದ ಮೃತಪಟ್ಟಿದ್ದ ತಂದೆಯ ನೋವಿನಲ್ಲೇ ಮಕ್ಕಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ಮನಕಲಕುವ ಘಟನೆ ಕಲಬುರಗಿ ನಗರದ ಫಿಲ್ಟರ್ ಬೆಡ್ ಪ್ರದೇಶದಲ್ಲಿ ನಡೆದಿದೆ.
ನಿನ್ನೆ ಹೃದಯಾಘಾತದಿಂದ 53 ವರ್ಷದ ಪ್ರಕಾಶ್ ನಾಯಕ್ ನಿಧನರಾಗಿದ್ದರು. ತಂದೆ ಸಾವನ್ನಪ್ಪಿದ ದಿನದಂದೇ ಇಬ್ಬರು ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಿಗದಿಯಾಗಿತ್ತು. ತಂದೆ ಸಾವಿನ ನೋವಲ್ಲೇ ವಿದ್ಯಾಶ್ರೀ ಹಾಗೂ ವಾಣಿಶ್ರೀ ಇಬ್ಬರೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಭವಿಷ್ಯ ರೂಪಿಸಿಕೊಂಡಿದ್ದಾರೆ. ಕಲಬುರಗಿ ನಗರದ ಮೆಹ್ತಾ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಈ ಮಕ್ಕಳು, ಪರೀಕ್ಷೆ ಬರೆದ ಬಳಿಕ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಈ ಮಕ್ಕಳ ನಡೆಗೆ ಎಲ್ಲರೂ ಮರುಕ ವ್ಯಕ್ತಪಡಿಸಿದ್ದಾರೆ.




