ಜಿಲ್ಲೆ

ಜಲಸಮರದಲ್ಲಿ ರೈತರ ರೋಷಾಗ್ನಿ

ಯಾದಗಿರಿ:  ಕಲ್ಯಾಣ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳ ಜೀವನಾಡಿಯಾದ ನಾರಾಯಣಪುರ ಜಲಾಶಯದಿಂದ ನೀರು ಬಿಡುವಂತೆ ಆಗ್ರಹಿಸಿ ರೈತರ ಪ್ರತಿಭಟನೆಗಳು ಹೆಚ್ಚುತ್ತಲಿವೆ. ಮಾಜಿ ಸಚಿವ ರಾಜೂಗೌಡ ನೇತೃತ್ವದಲ್ಲಿ 40 ಕಿಲೋ ಮೀಟರ್  ನೂರಾರು ಟ್ರ್ಯಾಕ್ಟರ್‌ಗಳ ಮೂಲಕ  ರ್ಯಾಲಿ ನಡೆಸಿ ನೀರು ಬಿಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಟ್ರ್ಯಾಕ್ಟರ್ ರ್ಯಾಲಿ ಮೂಲಕ ಗದ್ದಲ ಸೃಷ್ಟಿಸಿದ ಆರೋಪದಲ್ಲಿ ಹುಣಸಗಿ ತಾಲೂಕಿನ ನಾರಾಯಣಪುರ ಬಳಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು..ನಾರಾಯಣಪುರದ ಬಸವಸಾಗರ ಜಲಾಶಯದಿಂದ ಎಡ ದಂಡೆ ಕಾಲುವೆಗೆ ಏಪ್ರಿಲ್ 15 ರ ವರೆಗೆ ಕಾಲುವೆಗಳಿಗೆ ನೀರು ಹರಿಸಬೇಕೆಂಬುದು ರೈತರ ಆಗ್ರಹವಾಗಿದೆ.

ಪ್ರತಿಭಟನಾ ವೇದಿಕೆಗೆ ಮನವಿ ಸ್ವೀಕರಸಲು ಬಂದ ನೀರಾವರಿ ಇಲಾಖೆ ಅಧಿಕಾರಿಗಳು, ಸರಿಯಾಗಿ ಸ್ಪಂದಿಸದ ಆರೋಪ ಕೇಳಿ ಬಂತು. ಇದೇ ಕಾರಣಕ್ಕೆ ಏಕಾಏಕಿ ನೂರಾರು ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಡ್ಯಾಂ ಕಡೆ ನುಗ್ಗುಲು ಮುಂದಾದ್ರು. ಆದ್ರೆ ಮೊದಲೇ ಪೊಲೀಸರು ಬ್ಯಾರಿಕೇಡ್ ಹಾಕಿಕೊಂಡು ಬಂದೋಬಸ್ತ್ ಮಾಡಿಕೊಂಡಿದ್ರು. ಆದಾಗ್ಯೂ ಬ್ಯಾರಿಕೇಡ್ ಗಳನ್ನ ಹಾರಿ ನುಗ್ಗುವ ಪ್ರಯತ್ನ ಮಾಡಿದ್ರು. ಇದೆ ವೇಳೆ ಪೊಲೀಸರು ಹಾಗೂ ಹೋರಾಟಗಾರರ ಮಧ್ಯೆ ವಾಗ್ವಾದ ಗದ್ದಲ ಕೂಡ ನಡೆಯಿತು.ಮಾಜಿ ಸಚಿವ ರಾಜುಗೌಡ ಸೇರಿದಂತೆ ಹಲವರನ್ನ ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಲಾಯಿತು.

Comments (0)

Your email address will not be published. Required fields are marked *

Back to top button