ಜಿಲ್ಲೆ

42ರ ಅಂಕಲ್ ಲವ್ ಟಾರ್ಚರ್​ಗೆ 19ರ ಯುವತಿ ಸೂಸೈಡ್​

ಗದಗ: 42ರ ಅಂಕಲ್​ ಲವ್​ ಟಾರ್ಚರ್​ ಸಹಿಸಲಾಗದೇ 19 ವರ್ಷದ ಯುವತಿ ಸೂಸೈಡ್​ ಮಾಡಿಕೊಂಡಿರುವ ಘಟನೆ ನಗರದ ಬೆಟಗೇರಿ ಬಾಲಕಿಯರ ವೃತ್ತಪರ ಹಾಸ್ಟೇಲ್​ನಲ್ಲಿ ನಡೆದಿದೆ.

ಮುಂಡರಗಿ ತಾಲೂಕಿನ ವಿರುಪಾಪೂರ ತಾಂಡಾದ ನಿವಾಸಿ ವಂದನಾ(19) ಪಿನಾಯಿಲ್ ಕುಡಿದು ಸೂಸೈಡ್ ಮಾಡಿಕೊಂಡ ವಿದ್ಯಾರ್ಥಿನಿ. ವಂದನಾ ಗದಗದ ಜಿಮ್ಸ್​ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್​ ವ್ಯಾಸಾಂಗ ಮಾಡುತ್ತಿದ್ದಳು. ಡಾ. ಬಿ.ಆರ್​.ಅಂಬೇಡ್ಕರ್​ ಸರ್ಕಾರಿ ಮೆಟ್ರಿಕ್​ ನಂತರದ ವೃತ್ತಿಪರ ಬಾಲಕಿಯರ ಹಾಸ್ಟೆಲ್​ನಲ್ಲಿದ್ದುಕೊಂಡೇ ವ್ಯಾಸಂಗ ಮಾಡುತ್ತಿದ್ದಳು.

ಗುರುವಾರ ಹಾಸ್ಟೇಲ್​ನಲ್ಲಿ ಪಿನಾಯಿಲ್​ ಕುಡಿದಿದ್ದಾಳೆ. ಕೂಡಲೇ ನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

Comments (0)

Your email address will not be published. Required fields are marked *

Back to top button