ಜಿಲ್ಲೆರಾಜ್ಯಸುದ್ದಿ

ಕೊರಟಗೆರೆ ವಕೀಲರ ಸಂಘದ ನೂತನ ಪದಾಧಿಕಾರಿಗಳು

ತುಮಕೂರು: ಜಿಲ್ಲೆ ಕೊರಟಗೆರೆ ವಕೀಲರ ಸಂಘದ ಚುನಾವಣೆಯಲ್ಲಿ  19 ಮತಗಳನ್ನು ಪಡೆದು ನೂತನ ಅಧ್ಯಕ್ಷರಾಗಿ ಎಂ.ಎಲ್. ಸಂತೋಷ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎಸ್.ಎನ್ ಹನುಮಂತರಾಜು, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಹೆಚ್. ಮಂಜುನಾಥ್, ಜಂಟಿ ಕಾರ್ಯದರ್ಶಿಯಾಗಿ ಟಿ.ಕೆ. ಕೃಷ್ಣಪ್ಪ, ಖಜಾಂಚಿಯಾಗಿ ಕುಮಾರಿ ಅರುಂಧತಿ ಆಯ್ಕೆಯಾಗಿದ್ದಾರೆ.

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ, ನೂತನ ಅಧ್ಯಕ್ಷ  ಎಂಎಲ್ ಸಂತೋಷ್  ಮಾತನಾಡಿ, ವಕೀಲರಾದ ನಮಗೂ ಬಹಳಷ್ಟು ಸಮಸ್ಯೆಗಳಿವೆ.  ಆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಒದಗಿಸುವ ಕೆಲಸವನ್ನು ಮಾಡುತ್ತಾ  ವಕೀಲರ ಕ್ಷೇಮಾಭಿವೃದ್ಧಿಗೆ ಶ್ರಮಿಸುವ ಕೆಲಸ ಮಾಡುತ್ತೇನೆ. ನನ್ನ ಮೇಲೆ ಭರವಸೆ ಇಟ್ಟು ಮತ ಹಾಕಿದ ಎಲ್ಲಾ ನನ್ನ ವೃತ್ತಿ ಬಾಂಧವರಿಗೆ ಧನ್ಯವಾದಗಳು ಎಂದು ತಿಳಿಸಿದರು.

ವಕೀಲರಾದ  ಎ.ಎಂ  ಕೃಷ್ಣಮೂರ್ತಿ, ಪುಟ್ಟರಾಜಯ್ಯ, ಅನಿಲ್ ಕುಮಾರ್, ಶಿವಕುಮಾರ್, ಸುನೀಲ್, ಮಲ್ಲಿಕಾರ್ಜುನ್, ಬಿ.ಹೆಚ್ ನಾಗೇಂದ್ರಪ್ಪ, ಸಂತೋಷ್ ಲಕ್ಷ್ಮಿ, ಶಿಲ್ಪ, ಕೆಂಪರಾಜಮ್ಮ, ಬೃಂದಾ, ಮಂಜುಳಾ, ಶಿವರಾಜು, ತಿಮ್ಮೇಶ್ ಮಧುಸೂದನ್, ಕೆ.ಜೆ. ನಾಗರಾಜು, ಡಿ.ಜಿ. ತಿಮ್ಮರಾಜ, ಹೆಚ್.ಆರ್. ರಾಮಚಂದ್ರಯ್ಯ   ಸೇರಿ ವಿವಿಧ ಮುಖಂಡರು ಉಪಸ್ಥಿತರಿದ್ದರು.

Comments (0)

Your email address will not be published. Required fields are marked *

Back to top button