
ಬೀದರ್: ದೇಶದಾದ್ಯಂತ ಎಲ್ಲೆಡೆ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಖುಷಿಯಿಂದ ಪರಸ್ಪರ ಬಣ್ಣಗಳನ್ನು ಎರೆಚಾಡುತ್ತಿದ್ದಾರೆ. ಇಂದು ಹೋಳಿ ಹುಣ್ಣಿಮೆ ಹಿನ್ನೆಲೆಯಲ್ಲಿ ಯುವಕ, ಯುವತಿಯರು, ಮಕ್ಕಳು, ಮಹಿಳೆಯವರು, ವೃದ್ಧರು ಸೇರಿದಂತೆ ಎಲ್ಲರೂ ಬಣ್ಣದ ಓಕಳಿಯಲ್ಲಿ ಮಿಂದೆಳುತ್ತಿದ್ದಾರೆ. ರಾಜ್ಯದಲ್ಲೂ ಹೋಳಿ ಸಡಗರ ಜೋರಾಗಿ ನಡೆದಿದೆ. ಇನ್ನು ಬೀದರ್ ನಲ್ಲೂ ಸಹ ಬಣ್ಣದ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಗಡಿ ಜಿಲ್ಲೆಯಾದ ಬೀದರ್ ನ ಔರಾದ್ ನ ಘಮಸುಬಾಯಿ ತಾಂಡಾದಲ್ಲಿ ಲಂಬಾಣಿ ಸಂಪ್ರದಾಯದಂತೆ ಶಾಸಕ ಪ್ರಭು ಚೌಹಾಣ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು. ಇನ್ನು ಶಾಸಕ ಪ್ರಭು ಚೌಹಾಣ ಮಹಿಳೆಯರ ಲಂಬಾಣಿ ಪದಕ್ಕೆ ಪತ್ನಿಯ ಜೊತೆ ಸ್ಟೆಪ್ಸ್ ಹಾಕಿ ಸಂಭ್ರಮಿಸಿದರು.




