ರಾಜಕೀಯರಾಜ್ಯಸುದ್ದಿ

ಎಪಿಎಂಸಿ ಕಾಯ್ದೆ ಬಗ್ಗೆ ಸರ್ಕಾರಕ್ಕೆ ಕ್ರೋಡೀಕೃತ ವರದಿ ಸಲ್ಲಿಸಲಾಗುವುದು: ಶಿವಾನಂದ ಪಾಟೀಲ

ರಾಯಚೂರು: ನೂತನ ಎಪಿಎಂಸಿ ಕಾಯ್ದೆಯ ಬಗ್ಗೆ ವರ್ತಕರು ರೈತರ ಅಭಿಪ್ರಾಯ ಪಡೆಯಲು ಸಮಿತಿ ಹಲವೆಡೆ ಸಭೆ ನಡೆಸಿದೆ. ಕ್ರೋಡೀಕೃತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಸಮಿತಿಯ ಒಟ್ಟಾರೆ ಅಭಿಪ್ರಾಯದ ಆಧಾರದ ಮೇಲೆ ಸರ್ಕಾರ ನಿರ್ಣಯ ಕೈಗೊಳ್ಳಲಿದೆ ಎಂದು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.


ಇಲ್ಲಿನ ಗಂಜ್ ಪ್ರದೇಶದ ಎಪಿಎಂಸಿ ಆವರಣದ ಎಪಿಎಂಸಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ–ತಿದ್ದುಪಡಿ) ವಿಧೇಯಕ ಪರಿಶೀಲನಾ ಸಮಿತಿ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಕೇಂದ್ರ‌ ಸರ್ಕಾರ ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆ ಅನೇಕ ರಾಜ್ಯಗಳಲ್ಲಿ ರದ್ದಾಗಿದೆ. ಆದರೆ ಇನ್ನೂ ಕೆಲವೆಡೆ ಚರ್ಚೆ ನಡೆದಿದೆ. ಕಾಯ್ದೆ ಇರಬೇಕು, ಬದಲಾಯಿಸಬೇಕು ಅಭಿಪ್ರಾಯಗಳು ಬಂದಿವೆ. ಹೀಗಾಗಿ ಸಾಧಕ ಬಾಧಕಗಳನ್ನು ಸರ್ಕಾರ ಪರಿಶೀಲಿಸಲಿದೆ ಎಂದರು.

ರಾಯಚೂರು ಜಿಲ್ಲೆಗೆ ಟೆಕ್ಸ್ಟ್ ಟೈಲ್ ಪಾರ್ಕ್ ಬೇಡಿಕೆಯಿದೆ. ಆದರೆ ಕೇಂದ್ರ‌ ಸರ್ಕಾರ ಪಿ.ಎಂ‌ ಮಿತ್ರ‌ ಯೋಜನೆಯಡಿ‌ ಕಲಬುರಗಿಗೆ‌ ಮಂಜೂರು ಮಾಡಿದೆ ಎಂದು ತಿಳಿಸಿದರು. ರೈತ ಭವನ ಉದ್ಘಾಟನೆ ಮಾಡಿ ಉಪಯೋಗಕ್ಕೆ ಬಾರದ ಬಗ್ಗೆ ಕಾರ್ಯದರ್ಶಿ ಆದೆಪ್ಪ ಅವರಿಂದ ಮಾಹಿತಿ ಪಡೆದಿದ್ದೇನೆ. ಟೆಂಡರ್ ಕರೆದು ಶೀಘ್ರವೇ ಉಪಯೋಗಿಸಲು ಅನುವು ಮಾಡಿಕೊಡಲಾಗುವುದು ಎಂದರು.

Comments (0)

Your email address will not be published. Required fields are marked *

Back to top button