ಜಿಲ್ಲೆರಾಜಕೀಯರಾಜ್ಯ

ಬಿಜೆಪಿ ನಾಯಕರ ಕೀಳುಮಟ್ಟದ ರಾಜಕಾರಣವನ್ನು ರಾಮನೂ ಸಹಿಸಲ್ಲ

ಮಂಗಳೂರು: ರಾಮ ಮಂದಿರವನ್ನು ಅನಾವರಣ ಮಾಡುತ್ತಿರುವುದು ಹೆಮ್ಮೆಯ ವಿಚಾರವೇ. ಎಲ್ಲರೂ ಕೂಡಿ ಆಚರಿಸಬೇಕಾದ ಸಂತಸ ಕ್ಷಣದ ಈ ವೇದಿಕೆಯನ್ನು ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ಕಂದಕ ಸಷ್ಟಿ ಉಂಟು ಮಾಡುವ ಉದ್ದೇಶದಿಂದಾಗಿ ರಾಜಯಕೀಯ ಬೇರಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇಂತಹ ಕೀಳುಮಟ್ಟದ ಪ್ರವೃತ್ತಿಯನ್ನು ರಾಮನೂ ಕೂಡ ಮೆಚ್ಚಲಾರ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಅವರು ಬುಧವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಬಿಜೆಪಿ ಜನಪ್ರತಿನಿಧಿಗಳು ಅಶಿಕ್ಷಿತರಂತೆ ಜವಾಬ್ದಾರಿ ಮರೆತು ಹೇಳಿಕೆ ನೀಡುತ್ತಿದ್ದಾರೆ. ಆಯೋಧ್ಯೆ ವಿಚಾರ ವಿವಾದ ಇತ್ತು, ಅದು ಕೋರ್ಟ್ ನಲ್ಲಿ ಇತ್ಯರ್ಥ ಆಗಿದೆ. ಇದರಲ್ಲಿ ರಾಜಕೀಯ ಮಾಡುವುದು ಎಷ್ಟು ಸರಿ ಎಂದರು. ರಾಮ ಭಕ್ತರ ಮೇಲೆ ಕಾಂಗ್ರೆಸ್‌ ಸರ್ಕಾರಕ್ಕೆ ಯಾವುದೇ ಕೋಪವೇ ಇಲ್ಲ. ಇದರಲ್ಲಿ ರಾಜಕೀಯ ಮಿಶ್ರಣ ಮಾಡುವ ಬಿಜೆಪಿಗರ ಪ್ರಯತ್ನ ನಡೆಯುತ್ತಿದೆ. ಇವರು ಹುಬ್ಬಳ್ಳಿಯ ಪ್ರಕರಣವನ್ನು ಎಲ್ಲಿಂದಲೋ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಇಬ್ಬರ ಮೇಲೆ ಹಳೆಯ ಕ್ರಿಮಿನಲ್ ಪ್ರಕರಣ ಇತ್ತು .ಕೋರ್ಟ್ ಆದೇಶದ ಪ್ರಕಾರ ವಾರಂಟ್ ಇರುವಾಗ ಬಂಧಿಸಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಮಾಡಿಲ್ಲ. ನಿಮ್ಮದೇ ಬಿಜೆಪಿ ಸರ್ಕಾರ ಇದ್ದಾಗ ಪ್ರಕರಣ ಮುಗಿಸಬಹುದಿತ್ತಲ್ಲ, ಎಂದು ಅಕ್ರೋಶ ಹೊರಹಾಕಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳಿಗೂ ಅನುಕೂಲವಾಗಿದೆ.‌ ಶಬರಿಮಲೆಗೆ ವಿಶೇಷ ಬಸ್, ಅರ್ಚಕರಿಗೆ ಗೌರವಧನ ಹೆಚ್ಚಳ, ಸಾಮೂಹಿಕ ವಿಮೆ, ದೀಪಾವಳಿ ವೇಳೆ ಗೋಪೂಜೆ ಕಾಶಿ ಹೋಗುವವರ ಸಹಾಯಧನ ಹೆಚ್ಚಳ ಇದೆಲ್ಲ ಅವರಿಗೆ ಕಾಣಿಸುತ್ತಿಲ್ಲ ಎಂದರು. ಲವ್ ಜಿಹಾದ್ ಇಟ್ಕೊಂಡು ಗೆಲ್ಲಬೇಕು ಎನ್ನುವ ಮನೋಭಾವ ಬಹಳ ದಿನ ಉಳಿಯಲ್ಲ. ಜನ ಕೂಡ ಜಾಗೃತರಾಗಿದ್ದಾರೆ. ಜವಾಬ್ದಾರಿಯಿಂದ ವರ್ತಿಸಿ. ಸೌಹಾರ್ದ ವಾತಾವರಣ ಬೆಳೆಸುವುದನ್ನು ಬಿಟ್ಟು , ಸ್ವಾಸ್ತ್ಯ ಹಾಳು ಮಾಡಬೇಡಿ. ಗ್ಯಾರಂಟಿ ನೀಡುವ ಹಾಗೂ ಮಾತಿನಂತೆ ನಡೆದುಕೊಂಡು ಸರ್ಕಾರ ನಮ್ಮದು. ಇದನ್ನು ಅಭಿನಂದಿಸುವ ಬದಲು ಟೀಕೆ ಮಾಡುವುದು ಸರಿಯಾದ ಕ್ರಮವಲ್ಲ ಎಂದರು. ಮುಖಂಡರಾದ ಶಾಂತಲಾ, ಸಂತೋಷ್ ಕುಮಾರ್, ಚಂದ್ರಕಲಾ, ಉದಯ ಆಚಾರಿ, ರಾಕೇಶ್ ದೇವಾಡಿಗ, ಕೇಶವ ಮರೋಳಿ, ಚೇತನ್ ಕುಮಾರ್, ಯೋಗೀಶ್, ಪ್ರೇಮ್ ಇದ್ದರು.

Comments (0)

Your email address will not be published. Required fields are marked *

Back to top button