
ಗದಗ : ಜಿಲ್ಲೆಯ ನರಗುಂದ ಸಿಪಿಐ ಪೊಲೀಸ್ ಸ್ಟೇಷನ್ ಗೆ ಬಂದ ಸಾರ್ವಜನಿಕರ ಜೊತೆ ಬೀಗರ ಜೊತೆ ಮಾತನಾಡಿದಂಗೆ ಮಾತನಾಡ್ತಾರಂತೆ ಇದರಿಂದ ಲಾ ಅಂಡ್ ಆರ್ಡರ್ ಸಂಪೂರ್ಣ ಹಾಳಾಗುತ್ತೆ. ಮುಂದೆ ಬರುವ ಅಧಿಕಾರಿಗಳಿಗೆ ಹಿಡಿತ ತಪ್ಪುತ್ತದೆ. ಕೂಡಲೇ ಇದರ ಬಗ್ಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಮನಹರಿಸಬೇಕು ಅಂತ ಮಾಜಿ ಸಚಿವ ಸಿ ಸಿ ಪಾಟೀಲ್ ತಾಕೀತು ಮಾಡಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ತ್ರೈಮಾಸಿಕ ಕೆ ಡಿ ಪಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಮಾಜಿ ಸಚಿವರು, ಅಧಿಕಾರಿಗಳು ಇಂದು ಇರ್ತಾರೆ ನಾಳೆ ಹೋಗ್ತಾರೆ. ಆದರೆ, ಜಿಲ್ಲೆಯಲ್ಲಿ ನಾನು ಎಚ್ ಕೆ ಪಾಟೀಲರು,ಜಿ ಎಸ್ ಪಾಟೀಲ್ರು ಇರ್ತೆವೆ. ಹೀಗಾಗಿ ಸಾರ್ವಜನಿಕರ ಜೊತೆ ಅತಿಯಾದ ಪೊಲೀಸರ ಸಲಿಗೆ ಒಳ್ಳೆಯದಲ್ಲ ಅಂತ ಪರೋಕ್ಷವಾಗಿ ಹೇಳಿದರು.

ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲರು “ಹಾಗಾದ್ರೆ ನಿಮ್ಮ ಪ್ರಕಾರ ಪೊಲೀಸ್ರು ಯಾವ ರೀತಿ ನಡ್ಕೋಬೇಕು ಅಂತ ಪ್ರಶ್ನಿಸಿದ್ರು. ಇದಕ್ಕೆ ಪ್ರತ್ಯುತ್ತರಿಸಿದ ಸಿ ಸಿ ಪಾಟೀಲರು ಸಾರ್ವಜನಿಕರ ಜೊತೆ ಪೊಲೀಸರು ಕೆಲವೊಂದು ವಿಷಯದಲ್ಲಿ ಮಾನವೀಯತೆ ತೋರಿಸಬೇಕು. ಆದರೆ ಅತಿಯಾದ ಸಲಿಗೆ ಬೆಳೆಸಿದರೆ ಪೊಲೀಸರ ಹಿಡಿತ ತಪ್ಪುತ್ತದೆ ಅಂತ ಸಲಹೆ ನೀಡಿದ್ರು. ಒಟ್ಟಾರೆಯಾಗಿ ಮಾಜಿ ಹಾಲಿ ಸಚಿವದ್ವಯರ ಮಧ್ಯೆ ಕೆಡಿಪಿ ಸಭೆಯಲ್ಲಿ ಪೊಲೀಸರ ವಿಚಾರ ಗಂಭೀರವಾಗಿ ಚರ್ಚೆ ನಡೆಯಿತು.




