ಧರ್ಮ

ಅಯೋಧ್ಯೆಯ ರಾಮಮೂರ್ತಿಗೆ ಮೈಸೂರಿನ ಹೆಚ್,ಡಿ,ಕೋಟೆಯ ಕೃಷ್ಣ ಶಿಲೆ

ಮೈಸೂರು : ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಬಾಲ ರಾಮನ ಮೂರ್ತಿಯನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ್ದಾರೆ ಎಂಬುವುದು ಒಂದು ವಿಶೇಷವಾದರೆ, ಮೂರ್ತಿಗೆ ಬಳಸಲಾದ ಶಿಲೆ ಕೂಡ ಮೈಸೂರಿನದ್ದೇ ಎಂಬುವುದು ಮತ್ತೊಂದು ವಿಶೇಷವಾದ ಸಂಗತಿಯಾಗಿದೆ. ಜನವರಿ 22 ರಂದು ರಾಮ ಮಂದಿರ ಉದ್ಘಾಟನೆಯಾಗುತ್ತಿದೆ.

ಅಯೋಧ್ಯೆಗೆ ಮೈಸೂರಿನ ಶಿಲೆ, ಹಾಗೂ ಶಿಲ್ಪಿಯ ಸ್ಪರ್ಶ ಸಿಕ್ಕಿರೋದು ಹೆಮ್ಮೆ ತಂದಿದೆ. ಅಯೋಧ್ಯೆಯ ಬಾಲ ರಾಮನ ಮೂರ್ತಿಗೆ ಮೈಸೂರಿನ ಶಿಲೆಯನ್ನು ಬಳಸಲಾಗಿದೆ. ಶಿಲೆಯನ್ನು ಹೇಗೆ ಗುರುತಿಸಲಾಯಿತು? ಇದೇ ಶಿಲೆ ಬಳಸಬೇಕೆಂದುಗೊಂಡದ್ದು ಏಕೆ, ಎಂಬುದನ್ನು ನೋಡುವುದಾದರೆ, ರಾಮ ದಾಸನ ಜಮೀನಿನಲ್ಲಿ ಸಿಕ್ತು ಬಾಲ ರಾಮನ ಕೆತ್ತನೆಗೆ ಶಿಲೆ ಕೃಷ್ಣ ಶಿಲೆ ಮೂರ್ತಿ ಕೆತ್ತನೆಗೆ ಪ್ರಾಶಸ್ತ್ಯವಾಗಿರುವ ಕಲ್ಲಾಗಿದೆ.

ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ರಾಮ್‌ ದಾಸ್ ಎಂಬುವರ ಜಮೀನಿನಲ್ಲಿ ಈ ಕೃಷ್ಣ ಶಿಲೆ ಕಲ್ಲು ಸಿಕ್ಕಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ರಾಮ್‌ ದಾಸ್ ಜಮೀನು ಗುತ್ತಿಗೆ ಪಡೆದಿದ್ದ ಗುಜ್ಜೇಗೌಡನಪುರದ ಶ್ರೀನಿವಾಸ್ ಅವರನ್ನು ಸುರೇಂದ್ರ ವಿಶ್ವಕರ್ಮ ಅವರು ಸಂಪರ್ಕ ಮಾಡಿದ್ದರು.

ಮಾನಯ್ಯ ಬಡಿಗೇರ್ ಎಂಬುವರು ಕಲ್ಲು ಪರೀಕ್ಷೆ ಮಾಡಿದ್ದರು. ನಂತರ ಅಯೋಧ್ಯೆಯ ಗುರುಗಳ ಸಮ್ಮುಖದಲ್ಲಿ ಜಮೀನಿನಲ್ಲಿ ಸಿಕ್ಕ ಕಲ್ಲನ್ನು ಮೂರ್ತಿ ಕೆತ್ತನೆಗೆ ಅಂತಿಮ ಗೊಳಿಸಲಾಯಿತು. ಶುಭ ಕಾರ್ಯಗಳು ಆರಂಭವಾಗುತ್ತಿದ್ದಂತೆ ಒಂದಕ್ಕೆ ಒಂದರಂತೆ ಸಮಯ, ಸಂದರ್ಭಗಳ ಜೊತೆಗೆ ಎಲ್ಲಾ ಕಾರ್ಯಗಳು ತಾನಾಗೆ ಜರುಗುತ್ತವೆ ಎಂಬ ಮಾತಿನಂತೆ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲು ರಾಮಲಲ್ಲನ ಮೂರ್ತಿಗೆ ಕಲ್ಲು ಸಿಕ್ಕಿತ್ತು.

ರಾಮ್‌ ದಾಸ್ ಜಮೀನಲ್ಲಿ‌ 10 ಅಡಿ ಆಳದಲ್ಲಿ ಅಗೆದು ಶಿಲೆಯನ್ನು ತೆಗೆಯಲಾಯಿತು. ರಾಮನ ಮೂರ್ತಿಗಾಗಿ 19 ಟನ್ ತೂಕದ ಸುಮಾರು 9 ಅಡಿ 8 ಇಂಚು ಉದ್ದದ ಶಿಲೆಯನ್ನು ಹೊರ ತೆಗೆದು ಅಯೋಧ್ಯೆಗೆ ರವಾನಿಸಲಾಯಿತು. ರಾಮನ ಜೊತೆಗೆ ಸೀತೆ, ಲಕ್ಷ್ಮಣ, ಭರತ, ಶತೃಜ್ಞ ಮೂರ್ತಿಗೂ ಇಲ್ಲಿಂದಲೇ ಶಿಲೆ ರವಾನಿಸಲಾಗಿದೆ. ಕಲ್ಲು ಕಳುಹಿಸಿ ಪ್ರಚಾರ ಮಾಡಬಾರದು ಎಂದು ಅಯೋಧ್ಯೆ ಗುರುಗಳು ಶರತ್ತು ಹಾಕ್ಕಿದ್ದಕ್ಕೆ ಕಲ್ಲು ತೆಗೆದ ನಂತರ ಮಣ್ಣು ಮುಚ್ಚಿ ಭೂಮಿ ಸಮತಟ್ಟು ಮಾಡಿ ಈ ವಿಚಾರವನ್ನು ಆಚೆ ಬಾರದಂತೆ ನೋಡಿಕೊಳ್ಳಲಾಗಿದೆ. ಅಲ್ಲದೆ ಅಯೋಧ್ಯೆ ಗುರುಗಳು ರಾಮ ಮಂದಿರಕ್ಕಾಗಿ ಕಲ್ಲಿನ ಜೊತೆಗೆ ಇಲ್ಲಿನ ಮಣ್ಣನ್ನೂ ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಅಯೋಧ್ಯೆಗೆ ಸುಮಾರು 40 ಟನ್ ತೂಕದಷ್ಟು ಕಲ್ಲು ಕಳುಹಿಸಿಕೊಡಲಾಗಿದೆ. ಕಲ್ಲನ್ನು ಕಳುಹಿಸುವಾಗ ಗ್ರಾಮಸ್ಥರು ಪೂಜೆ ಸಲ್ಲಿಸಿ ಭಕ್ತಿ, ಗೌರವದಿಂದ ಕಲ್ಲನ್ನು ಕಳುಹಿಸಿಕೊಟ್ಟಿದ್ದಾರೆ. ಮೈಸೂರು ಜನತೆಗೆ ರಾಮಲಲ್ಲನ ಮೂರ್ತಿಯ ಸ್ಪರ್ಶದ ಅವಕಾಶ ಸಿಕ್ಕಿದೆ. ಮೈಸೂರಿನಿಂದ ಅಯೋಧ್ಯೆಗೆ ಕಲ್ಲು ತೆಗೆದುಕೊಂಡು ಹೋಗಿರುವುದು ನಿಜಕ್ಕೂ ಮೈಸೂರಿಗರಲ್ಲಿ ಭಕ್ತಿಭಾವದ ಜೊತೆಗೆ ಪುಣ್ಯ ಸಿಕ್ಕಂತಾಗಿದೆ.

Comments (0)

Your email address will not be published. Required fields are marked *

Back to top button