ದಾಸ ಮುಂದಿನ ವಾಸ ಹಿಂಡಲಗಾನಾ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ನಟ ದರ್ಶನ್ನ ಕೈದಿಗಳ ರೌಡಿಗಳ ಜೊತೆ ಬಿಂದಾಸ್ ಆಗಿ ಪಾರ್ಟಿ ಮಾಡ್ತಿರೋ ಫೋಟೋಈಗ ವೈರಲ್ ಆಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲಾ ಅನ್ನೋದಕ್ಕೆ ಸಾಕ್ಷಿಯಾಗಿ ಎದ್ದು ನಿಂತಿದೆ. ಅಷ್ಟೇ ಅಲ್ಲ ಗೃಹ ಇಲಾಖೆಯ ವೈಫಲ್ಯವನ್ನೂ ಇದು ಸಾರಿ ಹೇಳ್ತಿದೆ. ಇದು ಸರ್ಕಾರವನ್ನ ಮುಜುಗರಕ್ಕೀಡು ಮಾಡಿದಂತಾಗಿದೆ. ಹೀಗಾಗಿ ದರ್ಶನ್ನ ಇಲ್ಲಿಂದ ಹಿಂಡಲಗ ಜೈಲಿಗೆ ಶಿಫ್ಟ್ ಮಾಡೋಕೆ ಚರ್ಚೆಗಳು ಬಿರುಸಾಗಿವೆ.
ಇದು ಜೈಲಾಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ನಮ್ಮ ಗೃಹ ಇಲಾಖೆಯ ಬಿಗಿ ಇದೆಯೋ ಇಲ್ಲೋ ಗೊತ್ತಿಲ್ಲ. ಪ್ರಭಾವಿಗಳಾಗಿದ್ರೆ, ದುಡ್ಡಿರೋರಿದ್ರೆ ಕೈದಿಗಳಿಗೆ ಅದು ಸೆರೆಮನೆಯಲ್ಲ,ಅರಮನೆ ಅನ್ನೋ ಆಗಿದೆ. ಇಲ್ಲಿ ರೌಡಿಗಳದ್ದೇ ಕಾರುಬಾರು, ಜೈಲೇ ಇಲ್ಲದವರು ಥರ ಅಡ್ಡಾ. ಇಲ್ಲಿ ಮೊಬೈಲ್ ಬಳಕೆ ಮಾಡ್ಬೋದು, ಅಂದರ್ ಬಾಹರು ಆಡಬವುದು, ಹೊರಗಿಂದ ಒಳಗೆ ಸಿಗರೇಟು, ಎಣ್ಣೆ ಏನು ಬೇಕಾದರು ಬರಬಹುದು.
ಇದು ನಾಮಮಾತ್ರಕ್ಕೆ ಅಷ್ಟೇ ಕಾರಾಗೃಹ. ಇಲ್ಲಿ ಸೇಫಾಗಿ ಕೈದಿಗಳು ಇರಬಹುದು ಅನ್ನೋದಕ್ಕೆ ಈಗ ದಾಸ ದರ್ಶನ್ ಸಾಕ್ಷಿಯಾಗಿದ್ದಾರೆ. ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದೇವೆ, ಗೃಹಸಚಿವರ ಬಗ್ಗೆ ಚರ್ಚೆ ಮಾಡ್ತೇವೆ. ಅವರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡುವಂತೆ ಹೇಳಲಾಗಿದೆ ಅಂತ ಸಿಎಂ ಸಿದ್ದರಾಮಯ್ಯ ಹೇಳಿದ್ದರು, ದರ್ಶನ್ನನ್ನ ಇಲ್ಲಿಂದ ಹಿಂಡಲಗಾ ಜೈಲಿಗೆ ಸ್ಥಳಾಂತರ ಮಾಡೋದಷ್ಟೂ ಸುಲಭ ಸಾಧ್ಯನಾ ಎನ್ನುವ ಪ್ರಶ್ನೆ ಎದ್ದಿದೆ.
ಅಷ್ಟಕ್ಕೂ ಬ್ರಿಟೀಷರು ಸ್ವಾತಂತ್ರ್ಯ ಹೋರಾಟಗಾರರನ್ನ ಇರಿಸೋಕಂತ ನಿರ್ಮಿಸಿರುವ ದೇಶದ ಅತಿದೊಡ್ಡ ಜೈಲು ಈ ಬೆಳಗಾವಿಯ ಹಿಂಡಲಗಾ ಜೈಲು ಆಗಿದೆ. ಹಿಂಡಲಗಾ ಜೈಲಿನ ‘ಅಂದೇರಿ’ ಸೆಲ್ಗಳಿಗೆ ದರ್ಶನನ್ನ ಶಿಫ್ಟ್ ಮಾಡೋಕೆ ಕಾನೂನು ಸಂಬಂಧಿತ ಚರ್ಚೆಗಳನ್ನ ಜೈಲಾಧಿಕಾರಿಗಳು ಮಾಡುತ್ತಿದ್ಧಾರೆ. ದಾಸನನ್ನ ಸ್ಥಳಾಂತರ ಮಾಡೋಕೆ ನ್ಯಾಯಾಲಯದ ಅನುಮತಿ ಬೇಕೇ ಅಥವಾ ಜೈಲು ಆಡಳಿತವು ನಿರ್ಧರಿಸಬಹುದೇ ಅನ್ನೋ ಬಗ್ಗೆ ಚರ್ಚೆ ನಡಿತಿದೆ. ಇಷ್ಟೆಲ್ಲಾ ಸಲೀಸಾಗಿ ದರ್ಶನ್ ಇರುವುದರ ಹಿಂದಿನ ಕೈ ಯಾವುದು? ಹಿಂಡಲಗಾ ಜೈಲಲ್ಲಿ ದರ್ಶನ್ ಶಿಪ್ಟ್ ಎಲ್ಲಿಗೆ ಬರುತ್ತೆ ಅನ್ನೋದೇ ಸದ್ಯದ ಕುತೂಹಲಕಾರಿ ಪ್ರಶ್ನೆಯಾಗಿ ಉಳಿದಿದೆ.




