Freedom TV

3 ಪ್ರಕರಣಗಳ ಪೈಕಿ ಎರಡರಲ್ಲಿ ದರ್ಶನ್ A1, ಕುಖ್ಯಾತ ರೌಡಿಗಳ ಜತೆ ದಾಸನ ಕೇಸ್

ನಟ ದರ್ಶನ್ ಮೇಲಿನ ಕೇಸ್ಗಳ ಸಂಖ್ಯೆ ಹೆಚ್ಚುತ್ತಲೇ ಇದೆ
. ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿರುವ ದರ್ಶನ್, ನಟೋರಿಯಸ್ ರೌಡಿಗಳ ಜೊತೆ ಸೇರಿಕೊಂಡು ಜೈಲಿನ ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಮೂರು ಎಫ್ಐಆರ್ ದಾಖಲಾಗಿವೆ. ಆ ಪೈಕಿ ಎರಡು ಕೇಸ್ನಲ್ಲಿ ದರ್ಶನ್ ಎ1 ಆಗಿದ್ದಾರೆ. ಇದರಿಂದ ದರ್ಶನ್ಗೆ ಸಂಕಷ್ಟ ಹೆಚ್ಚಲಿದೆ.

ಕೊಲೆ ಆರೋಪದಲ್ಲಿ ಜೈಲು ಸೇರಿದ್ದ ದರ್ಶನ್ ಸುಧಾರಿಸಬಹುದು ಎಂದುಕೊಂಡರೆ, ಜೈಲಿನೊಳಗೆ ಆಗಿದ್ದೇ ಬೇರೆ. ಪರಪ್ಪನ ಅಗ್ರಹಾರಕ್ಕೆ ಹೋದ ಬಳಿಕ ದರ್ಶನ್ಗೆ ಕುಖ್ಯಾತ ರೌಡಿಗಳ ಜೊತೆ ನಂಟು ಹೆಚ್ಚಾಗಿದೆ. ಮೂರು ಪ್ರತ್ಯೇಕ ಎಫ್ಐಆರ್ಗಳ ಪೈಕಿ ಎರಡರಲ್ಲಿ ದರ್ಶನ್ ಎ1 ಆಗಿದ್ದಾರೆ. ಜೈಲಿನಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದಕ್ಕಾಗಿ ಈ ಕೇಸ್ಗಳು ದಾಖಲಾಗಿವೆ. ನಟೋರಿಯಸ್ ರೌಡಿಶೀಟರ್ಗಳಾದ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ, ಧರ್ಮ, ಸತ್ಯ ಮುಂತಾದವರ ಜೊತೆ ದರ್ಶನ್ ಕೇಸ್ ಹಾಕಿಸಿಕೊಂಡಂತೆ ಆಗಿದೆ. ಇದರಿಂದ ದರ್ಶನ್ಗೆ ಕಾನೂನಿನ ಸಂಕಷ್ಟ ಹೆಚ್ಚಾಗಿದೆ.

ವಿಚಾರಣಾಧೀನ ಖೈದಿ ಆಗಿರುವ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ್ದಕ್ಕಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಂದ್ರ ಕಾರಾಗೃಹಗಳ ಉಪನಿರ್ದೇಶಕರಾದ ಎಂ. ಸೋಮಶೇಖರ್ ಅವರಿಂದ ದೂರು ದಾಖಲು ಮಾಡಲಾಗಿದೆ. ಒಟ್ಟು ಮೂರೂ ಕೇಸ್ನಲ್ಲಿ ದರ್ಶನ್ ಆರೋಪಿ ಆಗಿದ್ದು, ನಟನಿಗೆ ಕಾನೂನಿನ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ

Comments (0)

Your email address will not be published. Required fields are marked *

Back to top button