Top Newsಕ್ರೈಂ ಸ್ಟೋರಿರಾಜಕೀಯರಾಜ್ಯಸಿನಿಮಾ

ಜಮೀರೂ ಇಲ್ಲ, ಮಲ್ಲಿ-ಕುಲಕರ್ಣಿಯೂ ಇಲ್ಲ-ನಾಗನೇ ಎಲ್ಲಾ..!

ಸೂಪರ್ ಸ್ಟಾರ್ ರೀತಿ ಮೆರೀತಿದ್ದ ನಟ ದರ್ಶನ್ ಈ ಅಕ್ಷರಶಃ ಏಕಾಂಗಿಯಾಗಿದ್ದಾರೆ.ಇದುವರೆಗೆ ತನ್ನ ಆಪ್ತರು ಅಂತಾ ದಚ್ಚು ಹೇಳಿಕೊಳ್ತಿದ್ದ ಸಚಿವರಾದ ಜಮೀರ್​ ಅಹಮದ್ ಖಾನ್, ಶಾಮನೂರು ಮಲ್ಲಿಕಾರ್ಜುನ್, ಶಾಸಕ ವಿನಯ್ ಕುಲಕರ್​​ಣಿ, ಮಾಜಿ ಸಂಸದೆ ಅಲಿಯಾಸ ಡಿ ಬಾಸ್ ಮದರ್ ಇಂಡಿಯಾ ಸುಮಲತಾ ಯಾರೂ ಇಲ್ಲ. ನೆಪಕ್ಕೆ ಜೈಲಿಗೆ ಬಂದು ಹೋಗೋ ಕೆಲವೇ ನಟರು. ಆಗಾಗ ಬರುವ ಪತ್ನಿ ನೆಂಟರು ಯಾರಿಂದಲೂ ದಾಸನಿಗೆ ನೆಮ್ಮದಿ ಸಿಕ್ಕಿಲ್ಲ. ಆದರೆ ನಟೋರಿಯಸ್ ಕಿಲ್ಲರ್ ವಿಲ್ಸನ್ ಗಾರ್ಡನ್ ನಾಗ ಮಾತ್ರ ಒಡಹುಟ್ಟಿದ ಸಹೋದರನಂತೆ ಬೆನ್ನಿಗೆ ನಿಂತಿದ್ದಾನೆ. ಡಿ ಬಾಸ್​ ಗೆ ಬಾಡೀ ಗಾರ್ಡೂ ಅವನೇ, ಗೆಳೆಯನೂ ಅವನೇ, ನೆಂಟನೂ ಅವನೇ, ಸಪ್ಲೈಯರೂ ಆತನೇ. ನನಗೆ ನೀನು ನಿನಗೆ ನಾನು ಅನ್ನೋ ತರಾ ದರ್ಶನ್ ಮತ್ತು ನಾಗ ಗಳಸ್ಯ ಕಂಠಸ್ಯ ಆಗಿದ್ದಾರೆ. ಜೈಲಲ್ಲಿ ಪುಡಿ ರೌಡಿಗಳು ತದುಕಿಬಿಟ್ಟಾರು ಅನ್ನೋ ಭಯಾ ಕೂಡಾ ದರ್ಶನ್ ಗೆ ಇದೆ. ಜತೆಗೆ ಒಬ್ಬಂಟಿಯಾಗಿ ಇರೋದು ಬೋರೋ ಬೋರು.ಇದನ್ನೇ ಬಂಡವಾಳವಾಗಿಸಿಕೊಂಡ ನಾಗ ಇದೀಗ ದರ್ಶನ್ ನ ಆಪ್ತರಕ್ಷಕನಾಗಿ ಬದಲಾಗಿದ್ದಾನೆ.

Comments (0)

Your email address will not be published. Required fields are marked *

Back to top button