Freedom TV

ಬೆಂಗಳೂರು ನಗರ ಡಿಸಿ K.A.ದಯಾನಂದ ಜಾಗಕ್ಕೆ ಕಳಂಕಿತ ಅಧಿಕಾರಿ..?

ಹಾಲಿ ಬೆಂಗಳೂರು ಡಿಸಿ ದಯಾನಂದ್ ಅವರ ಅವಧಿ ಮುಗಿಯುತ್ತಿರುವ ಬೆನ್ನಲ್ಲೇ ಹುದ್ದೆಗೆ ಬರಲು ಕ್ಯೂನಲ್ಲಿ ನಿಂತಿದ್ದಾರೆ ಐಎಎಸ್ ಅಧಿಕಾರಿಗಳು. ಬೆಂಗಳೂರು ಡಿಸಿ ಹುದ್ದೆ ರೇಸ್ ನಲ್ಲಿ 30ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳು ಇದ್ದಾರೆ.ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯನವರ ಆಪ್ತ ಅಧಿಕಾರಿ ದಯಾನಂದ್ ವರ್ಗಾವಣೆ ಆಗ್ತಾರಾ ಎಂಬ ಪ್ರಶ್ನೆ ಎದ್ದಿದೆ. ಇದೇ ವೇಳೆ ಆ ಸ್ಥಾನಕ್ಕೆ ವಕ್ಕರಿಸುತ್ತಾರಾ ಮೂಡಾ ಅಕ್ರಮದ ರೂವಾರಿ ಐಎಎಸ್ ಅಧಿಕಾರಿ ಎನ್ನುವ ಚರ್ಚೆ ಇದೀಗ ಶುರುವಾಗಿದೆ. ಮೈಸೂರಿನ ಮೂಡಾದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ ಐಎಎಸ್ ಅಧಿಕಾರಿಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆ ಮೇಲೆ ಕಣ್ಣಿದೆ. ಈ ಪೈಕಿ ಬೆಂಗಳೂರು ಜಿಲ್ಲಾಧಿಕಾರಿ ಹುದ್ದೆಗೆ ಬಂದೇಬಿಡ್ತಾರಾ ಭ್ರಷ್ಟ ಐಎಎಸ್ ಅಧಿಕಾರಿ ಅನ್ನೋ ಬಿಸಿ ಬಿಸಿ ಟಾಕ್ ಅಧಿಕಾರಿಗಳ ವಲಯದಲ್ಲಿ ಶುರುವಾಗಿದೆ. ಇದೇ ವೇಳೆ ಐಎಎಸ್ ಅಧಿಕಾರಿ ಪಿ.ಎಸ್ .ಕಾಂತರಾಜು ಬಂಧುಗಳ ಒತ್ತಡಕ್ಕೆ ಮಣಿದರಾ ಸಿಎಮ್ ಸಿದ್ದರಾಮಯ್ಯ? ಎನ್ನುವ ಸುದ್ದಿ ಹರಿದಾಡುತ್ತಿದೆ.ಮೂಡಾ ಅಕ್ರಮದ ರೂವಾರಿಗೆ ಆಮ್ ದಾನಿ ಜಾಗದ ಬಳುವಳಿ ಸಿಎಮ್ ಕೊಡ್ತಾರೆ ಅನ್ನೋ ಸುದ್ದಿ ಜೋರಾಗಿ ಸದ್ದು ಮಾಡ್ತಾ ಇದೆ.

Comments (0)

Your email address will not be published. Required fields are marked *

Back to top button