ರಾಜಕೀಯರಾಜ್ಯಸುದ್ದಿ

ಪೆನ್ ಡ್ರೈವ್ ಪ್ರಜ್ಜುಗೆ ಜೈಲೇ ಗತಿ !

ಬೆಂಗಳೂರು : ಅತ್ಯಾಚಾರ ಪ್ರಕರಣ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಚಿತ್ರೀಕರಿಸಿದ ಪ್ರಕರಣದಲ್ಲಿ  ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೈಲೆ ಖಾತ್ರಿಯಾಗಿದೆ.  ಜಾಮೀನು ಅರ್ಜಿ ವಜಾಗೊಳಿಸಿರುವ ಬೆಂಗಳೂರಿನ 42 ನೇ ಎಸಿಎಂಎಂ ನ್ಯಾಯಾಲಯ ಪ್ರಜ್ವಲ್ ರೇವಣ್ಣ ಗೆ ಜೂನ್ 24 ರ ವರೆಗೆ ನ್ಯಾಯಾಂಗ  ಬಂಧನ ವಿಧಿಸಿದೆ. ಕಳೆದ ಎಂಟು ದಿನಗಳಿಂದ ಎಸ್​ ಐಟಿ ವಶದಲ್ಲಿದ್ದ ಪ್ರಜ್ವಲ್ ಇದೀಗ ಪರಪ್ಪನ ಅಗ್ರಹಾರ ಜೈಲಿಗೆ ಹೋಗಲೇಬೇಕಾಗಿದೆ. ಪ್ರಜ್ವಲ್ ಆರೋಗ್ಯ ಚೆನ್ನಾಗಿದ್ದು ಅವರು ಯಾವುದೇ ಕಾರಣ ಕೊಟ್ಟು ಆಸ್ಪತ್ರೆವಾಸ ಕೂಡಾ ಮಾಡುವಂತಿಲ್ಲ. ಇದೀಗ ಪ್ರಜ್ವಲ್​ ಜೈಲು ಕಂಬಿ ಎಣಿಸಲೇಬೇಕಾಗಿದೆ.  ಇಂದು ಎಸ್​ ಐಟಿ  ಪ್ರಜ್ವಲ್ ನನ್ನು ಕೋರ್ಟ್​ ಗೆ ಹಾಜರುಪಡಿಸಿತ್ತು. ಜಡ್ಜ್​ಮೆಂಟ್​ ಹೊರಬೀಳುತ್ತಲೇ ಪೊಲೀಸರು ಪ್ರಜ್ವಲ್​ನ್ನು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದರು.

Comments (0)

Your email address will not be published. Required fields are marked *

Back to top button