Monday, June 23, 2025
26.3 C
Bengaluru
Google search engine
LIVE
ಮನೆಲೈಫ್ ಸ್ಟೈಲ್ಮನೆಮದ್ದು- ಹೂವುಗಳ ರಾಣಿ ಗುಲಾಬಿ ಹೂವಿನ ಪ್ರಯೋಜನಗಳು

ಮನೆಮದ್ದು- ಹೂವುಗಳ ರಾಣಿ ಗುಲಾಬಿ ಹೂವಿನ ಪ್ರಯೋಜನಗಳು

ಗುಲಾಬಿ ಗಿಡಗಳು ಚಳಿಗಾಲದ ಸಮಯದಲ್ಲಿ ಹೆಚ್ಚು ಹೂ ಬಿಡುತ್ತವೆ ಎಂಬ ಮಾತಿದೆ. ಆದರೆ ಗಿಡಗಳು ಸರ್ವಕಾಲದಲ್ಲೂ ಹೂ ನೀಡುತ್ತವೆ. ರೋಸ್ ವಾಟರ್ನಿಂದ ಸಹ ಬಹಳ ಉಪಯೋಗಗಳಿವೆ  

ಗುಲಾಬಿ ಹೂವಿನ ದಳಗಳಲ್ಲಿ ಕಂಡು ಬರುವ ಆಂಟಿ ಆಕ್ಸಿಡೆಂಟ್ ಅಂಶಗಳು ಚರ್ಮದ ಮೇಲೆ ಕಂಡುಬರುವ ಮೊಡವೆಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕಿ ಚರ್ಮದ ಕಿರಿಕಿರಿ ಮತ್ತು ಕೆರೆತವನ್ನು ದೂರ ಮಾಡುತ್ತವೆ.

ಹತ್ತಿಯಲ್ಲಿ ರೋಸ್ ವಾಟರ್‌ಅನ್ನು ನೆನೆಸಿ ಕಣ್ಣುಗಳ ಮೇಲೆ 5 ನಿಮಿಷ ಇಟ್ಟುಕೊಳ್ಳುವುದರಿಂದ ಕಣ್ಣುರಿ ಕಡಿಮೆಯಾಗುತ್ತದೆ.

ರೋಸ್‌ವಾಟರ್‌ನಿಂದ ಮುಖಕ್ಕೆ ಲೇಪಿಸುತ್ತಿದ್ದರೆ ಚರ್ಮದ ಕಾಂತಿ ಹೆಚ್ಚಾಗುತ್ತದೆ.

ಗುಲಾಬಿ ಎಸಳುಗಳನ್ನು ಬಿಡಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿಟ್ಟುಕೊಂಡು ಬೇಕಾದಾಗ ನೀರಿಗೆ ಹಾಕಿ ಸ್ವಲ್ಪ ಸಕ್ಕರೆ ಹಾಕಿ ಕುಡಿಯುವುದರಿಂದ ಬಾಯಿಹುಣ್ಣು ನಿವಾರಣೆಯಾಗುತ್ತದೆ.

ಗುಲಾಬಿಯಿಂದ ತೆಗೆಯುವ ತೈಲ ಬಳಕೆಯಿಂದ ಅತ್ಯಂತ ಸಿಟ್ಟು, ಭಯ ನಿವಾರಣೆ ಹಾಗೂ ಮಾನಸಿಕ ದೌರ್ಬಲ್ಯಗಳಿಗೆ ಉಪಯೋಗವಾಗುತ್ತದೆ.

ಗಂಡಸರಲ್ಲಿ ವೀರ್ಯಾಣು ಕೊರತೆಯಿದ್ದಾಗ ವೈದ್ಯರ ಸಲಹೆ ಮೇಲೆ ಗುಲಾಬಿ ಚಿಕಿತ್ಸೆ ಮಾಡಬಹುದು.

ಗುಲಾಬಿ ಹೂಗಳ ದಳಗಳು ದೇಹದ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸುವಲ್ಲಿ ಮತ್ತು ದೇಹದಿಂದ ವಿಷಕಾರಿ ಅಂಶಗಳನ್ನು ದೂರ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಸ್ನಾನಮಾಡುವ ಬಿಸಿನೀರಿನಲ್ಲಿ ಗುಲಾಬಿ ಹೂವಿನ ದಳಗಳನ್ನು ಹಾಕಿ ಸ್ವಲ್ಪ ಹೊತ್ತು ಬಿಟ್ಟರೆ ಗುಲಾಬಿ ಹೂವು ತನ್ನ ಪರಿಮಳವನ್ನು ನೀರಿನ ತುಂಬಾ ಹಬ್ಬುವಂತೆ ಮಾಡುತ್ತದೆ.

ತುಂಬಾ ಗಾಢವಾದ ತುಟಿಗಳ ಬಣ್ಣವನ್ನು ಹೊಂದಿರುವವರು ಸುಲಭವಾಗಿ ತುಟಿಗಳ ಬಣ್ಣವನ್ನು ಉತ್ತೇಜಿಸುವ ಗುಲಾಬಿ ಪೇಸ್ಟ್ ಅನ್ವಯಿಸಬಹುದು. ನಿಮ್ಮ ತುಟಿಗಳು ಸುಂದರವಾಗಿ ಕಾಣುವಂತೆ ಗುಲಾಬಿ ಹೂ ಮಾಡುತ್ತದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments