ರಾಜಕೀಯಸುದ್ದಿ

ಸರಳವಾಗಿ ನಾಮಪತ್ರ ಸಲ್ಲಿಸಲು ಕಾರಣ ಬಿಚ್ಚಿಟ್ಟ ದಿಂಗಾಲೇಶ್ವರ ಶ್ರೀಗಳು.

ಧಾರವಾಡ: ಲೋಕಸಭಾ ಚುನಾವಣೆಯ ಮತದಾನಕ್ಕೆ ದಿನಾಂಕ ಸಮೀಪಿಸುತ್ತಿದ್ದಂತೆ ಈಗ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ರಂಗು ಒಡೆದುಕೊಳ್ಳುತ್ತಿದೆ. ಈಗಾಗಲೇ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ನಾಮಿನೇಷನ್ ಫೈಲ್ ಮಾಡಿದ್ದು, ಇಂದು ತೀವ್ರ ಕುತೂಹಲ ಮೂಡುಸಿದ ದಿಂಗಾಲೇಶ್ವರ ಶ್ರೀಗಳು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ.

ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರ ವಿರುದ್ಧ ನೇರವಾಗಿ ಯುದ್ಧಕ್ಕೆ ಇಳಿದಿರೋ ಶಿರಹಟ್ಟಿಯ ಫಕೀರ ಶ್ರೀ ದಿಂಗಾಲೇಶ್ವರ ಶ್ರೀ ಅವರು ಹಲವು ಗುರುತ್ತರ ಆರೋಪದೊಂದಿಗೆ ಚುನಾವಣೆ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದರು.

ಅದರಂತೆ ಇಂದು ಶ್ರೀಗಳು ಸರಳವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲುಸುವುದಾಗಿ ಹೇಳಿಕೊಂಡಿದ್ದಾರೆ. ಅದರಂತೆ ಇಂದು ಶ್ರೀಗಳು ನಾಮಪತ್ರವನ್ನು ಯಾವುದೇ ಮೆರವಣಿಗೆ ಸೇರಿದಂತೆ ವಿಜೃಂಭಣೆಯಿಂದ ಮಾಡದೆ ಸರಳವಾಗಿ ಸೂಚಕರೊಂದಿಗೆ ಪಾದಯಾತ್ರೆಯ ಮೂಲಕ ಬಂದು ನಾಮ ಉಮೇದುವಾರಿಕೆ ಸಲ್ಕಿಕೆಗೆ ನಿರ್ಧಾರ ಮಾಡಿದ್ದಾರೆ.

ಇನ್ನೂ ದಿಂಗಾಲೇಶ್ವರ ಶ್ರೀಗಳು ಹಾಲಿ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ಈಗಾಗಲೇ ನಾಲ್ಕು ಬಾರಿ ಆಯ್ಕೆ ಮಾಡಿದ್ದಾರೆ. ಇಲ್ಲಿ ಲಿಂಗಾಯತ ಓಟ್ ಪಡೆದು ಗೆಲ್ಲುತ್ತಾ ಬಂದಿರೋ ಜೋಶಿಯವರು ಲಿಂಗಾಯತರನ್ನು ತುಳಿಯುತ್ತಿದ್ದಾರೆ‌. ಅಲ್ಲದೆ ಲಿಂಗಾಯತ ಪ್ರಾಬಲ್ಯ ಇರೋ ಕ್ಷೇತ್ರದಲ್ಲಿ ಲಿಂಗಾಯತರಿಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡಗೆ ಒತ್ತಾಯ ಮಾಡಿದ್ದರು.

ಆದರೆ ಅದಕ್ಕೆ ಬಿಜೆಪಿ ಹೈಕಮಾಂಡ್ ಸೊಪ್ಪು ಹಾಕದ ಹಿನ್ನಲೆಯಲ್ಲಿ ಈಗ ಜೋಶಿ ವಿರುದ್ಧ ಅವರನ್ನು ಸೋಲಿಸಲು ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಹೇಳಿ ಉಮೇದುವಾರಿಕೆ ಸಲ್ಲಿಕೆಗೆ ಇಂದು ಮುಂದಾಗಿದ್ದಾರೆ.

Comments (0)

Your email address will not be published. Required fields are marked *

Back to top button