ರಾಜಕೀಯರಾಜ್ಯಸುದ್ದಿ

ನಾನು ಯಾವುದೇ ತಪ್ಪು ಎಸೆಗಿಲ್ಲ, ಯಾರಿಗೂ ಅನ್ಯಾಯ ಮಾಡಿಲ್ಲ: ಜೋಶಿ

ದಿಂಗಾಲೇಶ್ವರ ಸ್ವಾಮೀಜಿ ಸೇರಿದಂತೆ ದಿಂಗಾಲೇಶ್ವರ ಗುರುಗಳ ಬಗ್ಗೆಯು ನನಗೆ ಅಪಾರವಾದ ಗೌರವ, ಭಕ್ತಿ ಹಾಗೂ ಶ್ರದ್ಧೆ ಇದೆ. ಅವರ ಎಲ್ಲ ಮಾತುಗಳನ್ನು ನಾನು ಆಶೀರ್ವಾದ ಅಂತಾ ಭಾವಿಸಿದ್ದೇನೆ. ವೈಯಕ್ತಿಕವಾದ ಟೀಕೆ, ಆರೋಪಗಳಿಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಧಾರವಾಡ ಲೋಕಸಭಾ ಬಿಜೆಪಿ‌ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಹೇಳಿದರು.

ದಿಂಗಾಲೇಶ್ವರ ಸ್ವಾಮಿಗಳು ಸಮಯ ಕೊಟ್ಟಲ್ಲಿ ಅವರ ಜೊತೆ ಮಾತನಾಡುತ್ತೇನೆ. ಅವರಿಗಾದ ತಪ್ಪು ಗ್ರಹಿಕೆಯನ್ನ ಸರಿಪಡಿಸುವ ಪ್ರಯತ್ನ ಮಾಡುತ್ತೇನೆ. ಅವರು ಏನೇ ಮಾತನಾಡಿದ್ದರೂ ಅದನ್ನ ನಾನು ಆಶೀರ್ವಾದ ಎಂದು ಭಾವಿಸುತ್ತೇನೆ. ನಾನು ಯಾವುದೇ ತಪ್ಪು ಎಸೆಗಿಲ್ಲ ಯಾರಿಗೂ ಅನ್ಯಾಯ ಮಾಡಿಲ್ಲ ಎಂದರು.

ಇನ್ನೂ ಜೋಶಿ ಮಗಳ ಮದುವೆಯಲ್ಲಿ ಅಪಮಾನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು , ನನ್ನ ಮಗಳ ಮದುವೆಯಾಗಿ ಮೊಮ್ಮಗಳು ಜನಿಸಿದ್ದಾಳೆ. ಈಗ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಈ ವಿಚಾರದ ಬಗ್ಗೆ ನಾನು ಹೆಚ್ಚೇನೂ ಮಾತನಾಡಲ್ಲ, ಆದರೆ ಅವರ ಟೀಕೆಗಳನ್ನು ನಾನು ಆಶೀರ್ವಾದ ಎಂದು ಭಾವಿಸುತ್ತೇನೆ ಎಂದು ಹೇಳಿದರು.

Comments (0)

Your email address will not be published. Required fields are marked *

Back to top button