ಜಿಲ್ಲೆರಾಜಕೀಯರಾಜ್ಯ

ಡಿಕೆಶಿ ವಿರುದ್ಧ ಯತ್ನಾಳ್​ ಟ್ವೀಟ್​

ವಿಜಯಪುರ : ಡಿಸಿಎಂ ಡಿ‌‌‌ ಕೆ ಶಿವಕುಮಾರ ವಿರುದ್ದ ಸಿಬಿಐ ತನಿಖೆ ವಾಪಾಸಾತಿಗೆ  ಸರ್ಕಾರದ ನಿರ್ಧಾರ ವಿಚಾರವಾಗಿ, ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹೈಕೋರ್ಟ್​ ಮೊರೆ ಹೋಗಿದ್ದಾರೆ.  

ಹೈಕೋರ್ಟ್​ನಲ್ಲಿ ಈ ಕುರಿತು ವಿಚಾರಣೆ ನಡೆದಿರುವ ಬಗ್ಗೆ ಟ್ವೀಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.  ಸಿಬಿಐ ತನಿಖೆಗೆ ಅನುಮತಿ ವಾಪಸಾತಿ ವಿರುದ್ಧ ನಾನು  ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ವಿಚಾರಣೆ ನಡೆಸಿದೆ. ಭ್ರಷ್ಟಾಚಾರದ ವಿರುದ್ಧ ದಿನಂಪ್ರತಿ ಮಾತನಾಡುವ ಸಿದ್ದರಾಮಯ್ಯ, ಭ್ರಷ್ಟ್ರಾಚಾರಿಯ ರಕ್ಷಣೆಗೆ ನಿಂತಿರುವುದು ದುರಂತ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಟ್ವೀಟ್​ ಮೂಲಕ ಪ್ರಶ್ನೆ ಮಾಡಿದ್ದಾರೆ.​

Comments (0)

Your email address will not be published. Required fields are marked *

Back to top button