
ಕೆಕೆಪಿಆರ್ ಪಕ್ಷವನ್ನ ಸ್ಥಾಪಿಸಿದ್ದ ಸ್ಥಾಪಕ ಜನಾರ್ಧನ ರೆಡ್ಡಿಯನ್ನ ಮರಳಿ ಕರೆ ತರುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಳ್ಳುವುದರ ಮೂಲಕ ತನ್ನ ಕೆಕೆಪಿಆರ್ ಪಕ್ಷವನ್ನ ಬಿಜೆಪಿಯಲ್ಲಿ ವಿಲೀನಗೊಳಿಸಿದರು ಕೇಂದ್ರ ಗೃಹ ಸಚಿವ ಕಳೆದ ಕೆಲ ದಿನಗಳ ಹಿಂದೆ ರೆಡ್ಡಿ ಮನವೊಲಿಸಿದರು.
ಈ ಬಗ್ಗೆ ಮಾತನಾಡಿದ ಬಿವೈವಿ ಜನಾರ್ಧನ ರೆಡ್ಡಿ ಪಕ್ಷಕ್ಕೆ ಸೇರುವ ಮುಖೇನ ಆನೆ ಬಲ ತಂದುಕೊಟ್ಟಿದ್ದಾರೆ ,ಈ ಬಾರಿ 28 ಲೋಕ ಸಭೆ ಸೀಟು ಗೆಲ್ಲುವುದಕ್ಕೆ ಸರಳವಾಗಲಿದೆ ಎಂದರು. ಬಿಜೆಪಿಯ ಹಿರಿಯ ಮುಖಂಡರ ಮರು ಪ್ರವೇಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈವಿ ಸಂತಸ ವ್ಯಕ್ತ ಪಡಿಸಿದರು. ಇನ್ನು ಬಿಜೆಪಿ ಪಕ್ಷದ ಸಿದ್ದಾ೦ತವನ್ನ ಅಳವಡಿಸಿಕೊಂಡು ಬೆಳೆದ ನನಗೆ ಈ ಬಾರಿಯೂ ಮೋದಿ ಅಧಿಕಾರದ ಗದ್ದುಗೆ ಏರಬೇಕೆಂಬುವುದೆ ನನ್ನ ಇರಾದೆ ಎಂದರು.
ಎಲ್ಲರೂ ಸಂಘಟನೆಯನ್ನ ಬೆಳಸುವ ದೃಷ್ಠಿಯಲ್ಲಿ ಸಹಕರಿಸಬೇಕು ಎಂದು ಜನಾರ್ದನ ರೆಡ್ಡಿ ಮಾತನಾಡಿದರು. ಇನ್ನು ಗಣಿದಣಿಯ ಪತ್ನಿಯು ಬಿಜೆಪಿ ಸೇರ್ಪಡೆ ಗೊಂಡರು. ಒಟ್ಟಾರೆ ಲೋಕ ಸಭೆ ಚುನಾವಣೆಯ ಹೊಸ್ತಿಲಲ್ಲಿ ರಾಜಕೀಯ ನಿರ್ಧಾರಗಳು ಸಹಜ ಎನ್ನುತ್ತಿದ್ದಾರೆ ರಾಜ್ಯದ ಜನ.




