
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮಕ್ಕೆ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ ಆರ್ .ಅಶೋಕ್ ವರ್ತನೆ ಇದೀಗ ಚರ್ಚೆಗೆ ಗ್ರಾಸವಾಗಿದೆ.ಸುಲೇಪೇಟ್ ಗ್ರಾಮದ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್ ಅಶೋಕ ಅವರಿಗೆ ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿದ್ರು.ಇದೇ ವೇಳೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸನ್ಮಾನಿಸುವಾಗ ಹಣೆಗೆ ತಿಲಕ ಇಡಲು ಮುಂದಾದ ಬಿಜೆಪಿ ಹಿರಿಯ ಮುಖಂಡ ಡಾ.ವಿಶ್ವನಾಥ ಪವಾರ್ ಅವರಿಗೆ ಹಣೆಗೆ ತಿಲಕ ಇಡದಂತೆ ಆರ್. ಅಶೋಕ್ ನಿರಾಕರಿಸಿದ್ದಾರೆ.ಇದರಿಂದ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಇರುಸು ಮುರುಸುಗೊಂಡರು




