Freedom TV
ಸಮಲತಾಗೆ ಮಂಡ್ಯ ಬಿಜೆಪಿ ಟಿಕೆಟ್ ಮಿಸ್ ?

ಸಮಲತಾಗೆ ಮಂಡ್ಯ ಟಿಕೆಟ್ ಮಿಸ್ ಆಗಿದ್ಯಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ಮೈಸೂರಿನಲ್ಲಿ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ನೀಡಿರುವ ಹೇಳಿಕೆ ಸುಮಲತಾ ಅವರಿಗೆ ಮಂಡ್ಯ ಟಿಕೆಟ್ ಮಿಸ್ ಆಗಿದೆ ಅನ್ನೋ ಮುನ್ಸೂಚನೆ ನೀಡಿದೆ. ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಮೈಸೂರಿನಲ್ಲಿ ಮಾತನಾಡಿ, ಜೆಡಿಎಸ್ ಗೆ ಕೋಲಾರ, ಹಾಸನ, ಮಂಡ್ಯ ಬಿಟ್ಟುಕೊಡಲು ತೀರ್ಮಾನವಾಗಿದೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ. ಅಲ್ಲದೇ ಈ ಕುರಿತು ಸಮಲತಾ ಅವರ ಜೊತೆ ಮಾತನಾಡಿದ್ದೇವೆ. ಸಮಲತಾ ಅವರಿಗೆ ಒಳ್ಳೆಯ ರಾಜಕೀಯ ಭವಿಷ್ಯ ಇದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಮಾತನಾಡಿದ ಆರ್.ಅಶೋಕ್ ,ಮಂಡ್ಯದಲ್ಲಿ ಯಾವುದೇ ಸಮಸ್ಯೆಯಾಗಲ್ಲ. ರಾಷ್ಟ್ರೀಯ ನಾಯಕರೇ ಸುಮಲತಾ ಅವರ ಜೊತೆ ಮಾತುಕತೆ ನಡೆಸ್ತಾರೆ ಎಂದು ತಿಳಿಸಿದ್ದಾರೆ,.




