Freedom TV

ಅಪ್ಪು ಸಂಭ್ರಮ- ಕನ್ನಡದ ‘ಅಣ್ಣಬಾಂಡ್’ಗೆ ಅಭಿಮಾನಿಗಳಿಂದ ‘ಬಿಂದಾಸ್’ ವಿಶ್

ಕನ್ನಡಿಗರ ಆರಾಧ್ಯ ದೈವ… ಯುವಕರ ಕಣ್ಮಣಿ.. ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ರವರ 49ನೇ ಹುಟ್ಟು ಹಬ್ಬವನ್ನ ಅಭಿಮಾನಿಗಳು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ಕನ್ನಡಿಗರ ವೀರ ಕನ್ನಡಿಗ, ಅಭಿಮಾನಿಗಳ ನಟ ಸಾರ್ವಭೌಮ ಹುಟ್ಟುಹಬ್ಬವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಡಿ ಕ್ರಾಸ್​ನಲ್ಲಿರುವ ಅಪ್ಪು ಚೌಕದಲ್ಲಿ ಅಪ್ಪು ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ.

ಅಪ್ಪು ಅಭಿಮಾನಿಗಳು ಪುನೀತ್ ರಾಜ್ಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಪ್ಪುಗೆ ಪ್ರೀತಿಯ ಶುಭಾಶಯಗಳನ್ನು ಹಾರೈಸಿದ್ದಾರೆ. ಯುವ ಮನಸುಗಳಿಂದ ರನ್ ಫಾರ್ ಪವರ್ ಮ್ಯಾರಥಾನ್ ಆಯೋಜನೆ ಮಾಡಲಾಗಿದೆ. ಮ್ಯಾರಥಾನ್ನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿ ನೂರಾರು ಅಭಿಮಾನಿಗಳು ಭಾಗವಹಿಸಲಿದ್ದಾರೆ. ಇನ್ನು ಸಂಭ್ರಮದಲ್ಲಿ ಕಲಾತಂಡಗಳ ಮೆರಗು ತುಂಬಿದ್ದು ಅಭಿಮಾನಿಗಳು ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ದಿನವಿಡಿ ಅನ್ನದಾನ ಮಾಡಿದರು.

Comments (0)

Your email address will not be published. Required fields are marked *

Back to top button