Freedom TV
ಕಿಡಿಗೇಡಿಗಳಿಂದ ಮೆಣಸಿನಕಾಯಿಗೆ ಬೆಂಕಿ..!

ಬಳ್ಳಾರಿ:- ಕಿಡಿಗೇಡಿಗಳಿಂದ ಮೆಣಸಿನಕಾಯಿ ರಾಶಿಗೆ ಬೆಂಕಿ ಹಚ್ಚಿದ ಘಟನೆ ಬಳ್ಳಾರಿ ತಾಲೂಕಿನ ಶ್ರೀಧರಗಡೆ ಗ್ರಾಮದಲ್ಲಿ ಜರುಗಿದೆ. ಈ ಘಟನೆಯಲ್ಲಿ ಮೆಣಸಿನಕಾಯಿ ಸಂಪೂರ್ಣ ಸುಟ್ಟು ಕರಕಲಾಗಿ ಭಸ್ಮವಾಗಿದೆ.
ಶ್ರೀಧರಗಡೆ ಗ್ರಾಮದ ರೈತರಿಗೆ ಸೇರಿದ 6 ಎಕರೆ ಮೆಣಸಿನ ಕಾಯಿ ಭಸ್ಮವಾಗಿದೆ. ಹರಿದು ರಾಶಿ ಹಾಕಿರುವ ಮೆಣಸಿನ ಕಾಯಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹತ್ತಿದ ಮೆಣಸಿನ ರಾಶಿಗೆ ನೀರು ಹಾಕಿದರೂ ಬೆಂಕಿಯ ಕೆಂಡ ನಂದಿಲ್ಲ. ಸುಟ್ಟ ಮೆಣಸಿನ ಕಾಯಿಯನ್ನು ನೋಡಿ ರೈತರು ಕಣ್ಣೀರಿಟ್ಟಿದ್ದಾರೆ.



