Tuesday, November 18, 2025
21.9 C
Bengaluru
Google search engine
LIVE
ಮನೆರಾಜ್ಯಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ಸಾವು: ಅನಾಥರಾದ ಇಬ್ಬರು ಮಕ್ಕಳು

ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ಸಾವು: ಅನಾಥರಾದ ಇಬ್ಬರು ಮಕ್ಕಳು

ಬಾಗಲಕೋಟೆ: ಪತಿ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಪತ್ನಿಯೂ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ನಡೆದಿದೆ.ಜೀವನದಲ್ಲಿ ಜೊತೆ ಜೊತೆಗಾಗಿ ಬಾಳೋಣ ಎಂದು ಮದುವೆಯಾದ ಈ ದಂಪತಿ ಸಾವಿನಲ್ಲೂ ಜೊತೆಯಾಗಿದ್ದು ದುರಂತವೇ ಸರಿ.

5 ವರ್ಷದ ಸರೋಜಾ, ಶಶಿಧರ್ ಪತ್ತಾರ (40) ಸಾವನ್ನಪ್ಪಿದ ದಂಪತಿ. ಶಶಿಧರ್‌ಗೆ ಲೋ ಬಿಪಿಯಾಗಿ ಆಸ್ಪತ್ರೆಗೆ ಸಾಗಿಸುವಾಗ ಹೃದಯಾಘಾತದಿಂದ ಮೃತಪಟ್ಟಿದ್ದರು. ಪತಿ ಸಾವಿನ ಸುದ್ದಿ ಕೇಳಿ ಹೃದಯಾಘಾತದಿಂದ ಪತ್ನಿ ಕೂಡ ಕೊನೆಯುಸಿರೆಳೆದಿದ್ದಾರೆ. ಈ ದಂಪತಿ ಸಾವು ಮನೆ ಮಂದಿಗೆ ದೊಡ್ಡ ಆಘಾತ ನೀಡಿದೆ. ಇಬ್ಬರ ಸಾವು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

15 ವರ್ಷಗಳ ಕಾಲ ಅನ್ಯೋನ್ಯವಾಗಿ ಬದುಕಿದ್ದ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ. ತಂದೆ-ತಾಯಿಯನ್ನ ಕಳೆದು ಕೊಂಡು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments