ಬೆಂಗಳೂರು: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ದಿಢೀರ್ ನಂದಿನಿ ತುಪ್ಪದ ಬೆಲೆ ಏರಿಕೆ ಮಾಡಿ ಕೆಎಂಎಫ್ ಗ್ರಾಹಕರಿಗೆ ಶಾಕ್ ಕೊಟ್ಟಿದೆ.
ನಂದಿನ ತುಪ್ಪದ ದರ ಏಕಾಏಕಿ 90 ರೂ. ಏರಿಕೆ ಯಾಗಿದೆ. ಇಂದಿನಿಂದಲೇ ಪರಿಷ್ಕೃತ ದರ ಕೂಡ ಜಾರಿಗೆ ಬರಲಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಇದೀಗ ತುಪ್ಪದ ಬೆಲೆ ಏರಿಕೆಯಾಗಿ ಜನ ಸಾಮಾನ್ಯ ಜೇಬಿಗೆ ಕತ್ತರಿ ಬಿದ್ದಿದೆ. ಈ ಹಿಂದೆ 1 ಕೆಜಿ ತುಪ್ಪಕ್ಕೆ 610 ರೂ. ಇತ್ತು, ಸದ್ಯ 90 ರೂ. ಏರಿಕೆಯಿಂದ 700 ರೂ.ಗೆ ಏರಿಕೆಯಾಗಿದೆ. ಕೆಎಂಎಫ್ ತುಪ್ಪಕ್ಕೆ ಭಾರೀ ಬೇಡಿಕೆ ಇದ್ದು, ಕೆಎಂಎಫ್ ತುಪ್ಪ ಈಗ ಬಲು ದುಬಾರಿ ಆಗಿದೆ.


