Wednesday, November 19, 2025
21.1 C
Bengaluru
Google search engine
LIVE
ಮನೆ#Exclusive NewsTop Newsಫಿಡೆ ಮಹಿಳಾ ವಿಶ್ವಕಪ್​; ದಿವ್ಯಾ ದೇಶ​ಮುಖ್​ಗೆ ಚಾಂಪಿಯನ್​ ಪಟ್ಟ

ಫಿಡೆ ಮಹಿಳಾ ವಿಶ್ವಕಪ್​; ದಿವ್ಯಾ ದೇಶ​ಮುಖ್​ಗೆ ಚಾಂಪಿಯನ್​ ಪಟ್ಟ

ಜಾರ್ಜಿಯಾ: 19 ವರ್ಷದ ದಿವ್ಯಾ ದೇಶಮುಖ್​ ಫಿಡೆ ಮಹಿಳಾ ಚೆಸ್​ ವಿಶ್ವಕಪ್​ ಚಾಂಪಿಯನ್​​ ಆಗಿ ಹೊರಹೊಮ್ಮುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ಭಾರತದ ಅನುಭವಿ ಚೆಸ್‌ ಆಟಗಾರ್ತಿ ಕೊನೆರು ಹಂಪಿ ಅವರನ್ನು ಟ್ರೈ ಬ್ರೇಕರ್​ ಪಂದ್ಯದಲ್ಲಿ ಸೋಲಿಸುವ ಮೂಲಕ ಮೊದಲ ಬಾರಿಗೆ ವಿಶ್ವಕಪ್ ಜಯಿಸಿದರು. ಈ ಮೂಲಕ ಚೆಸ್ ವಿಶ್ವಕಪ್​ ಗೆದ್ದಿದ್ದಾರೆ. ದಿವ್ಯಾ ದೇಶಮುಖ್ ಅವರು ಒಟ್ಟಾರೆ 88ನೇ ಇಂಡಿಯನ್​ ಗ್ರಾಂಡ್​ ಮಾಸ್ಟರ್​ ಆಗಿದ್ದಾರೆ.

ಫೈನಲ್‌ಗೆ ಮುನ್ನ 39 ವರ್ಷದ ಕೊನೆರು ಹಂಪಿ ಅವರೆ ಗೆಲ್ಲುವ ಫೇವರೇಟ್‌ ಆಗಿದ್ದರು. ಶನಿವಾರ ನಡೆದ ಫೈನಲ್‌ನಲ್ಲಿ ದಿವ್ಯಾ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಆದ್ರೆ ಕೊನೆ ಕ್ಷಣದಲ್ಲಿ ದಿವ್ಯಾ ಮಾಡಿದ ತಪ್ಪು ನಡೆಯಿಂದ ಪಂದ್ಯವನ್ನು ಡ್ರಾ ಮಾಡುವಲ್ಲಿ ಹಂಪಿ ಯಶಸ್ವಿಯಾಗಿದ್ದರು. ಭಾನುವಾರ ನಡೆದ ಎರಡನೇ ಪಂದ್ಯವೂ ಡ್ರಾದಲ್ಲಿ ಅಂತ್ಯಗೊಂಡಿದ್ದರಿಂದ ಪಂದ್ಯ ಟೈ-ಬ್ರೇಕ್​ನತ್ತ ಸಾಗಿತ್ತು.

ಉನ್ನತ ಶ್ರೇಯಾಂಕಿತ ಎದುರಾಳಿಗಳ ವಿರುದ್ಧ ಅವರು ನಿರಂತರವಾಗಿ ಬಲವಾದ ಆಕ್ರಮಣಕಾರಿ ಆಟ ಮತ್ತು ಸಂಪೂರ್ಣ ಸಿದ್ಧತೆಯನ್ನು ಪ್ರದರ್ಶಿಸಿದರು. ಅವರ ಸಾಧನೆಯು ಭಾರತೀಯ ಚೆಸ್‌ನಲ್ಲಿ ಉದಯೋನ್ಮುಖ ಪ್ರತಿಭೆಯನ್ನು ಪ್ರತಿನಿಧಿಸುತ್ತದೆ, ಯುವ ಆಟಗಾರರು ಅಂತರರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. 19 ವರ್ಷದ ಬಾಲಕಿಯ ವಿಶ್ವಕಪ್ ಗೆಲುವು ಅವರ ವೃತ್ತಿಜೀವನದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ ಮತ್ತು ಭಾರತೀಯ ಚೆಸ್ ಇತಿಹಾಸಕ್ಕೆ ಮತ್ತೊಂದು ಸಾಧನೆಯನ್ನು ಸೇರಿಸುತ್ತದೆ.

ದಿವ್ಯಾ ಚೆಸ್​ ಗ್ರ್ಯಾಂಡ್​ ಮಾಸ್ಟರ್​ ಆದ 88ನೇ ಆಟಗಾರ್ತಿ.. ತನಗಿಂತ ಎರಡುಪಟ್ಟು ಹೆಚ್ಚು ವಯಸ್ಸಿನ ಎದುರಾಳಿ ವಿರುದ್ಧ ಗೆಲುವು ಸಾಧಿಸಿದ ಬಳಿಕ ದಿವ್ಯಾ ದೇಶಮುಖ್ ಕಣ್ಣೀರು ಹಾಕಿದ್ರು.  ನನ್ನ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಲು ಸಮಯ ಬೇಕು. ನಾನು ಈ  ರೀತಿ ಗ್ರ್ಯಾಂಡ್​ ಮಾಸ್ಟರ್​ ಪ್ರಶಸ್ತಿಯನ್ನು ಪಡೆದದ್ದು ಅದೃಷ್ಟ ಎಂದು ಭಾವಿಸುತ್ತೇನೆ ಎಂದ್ರು.
ಇನ್ನು ಈ ಪಂದ್ಯವನ್ನು ಕುತೂಹಲದಿಂದ ವೀಕ್ಷಿಸಿದ ವಿಶ್ವನಾಥನ್ ಆನಂದ್​  ದಿವ್ಯಾ ದೇಶಮುಖ್ ಆಟವನ್ನು ಶ್ಲಾಘಿಸಿದ್ದಾರೆ. ಇದು ಭಾರತೀಯ ಚೆಸ್​ನ ಮಹಾನ್​ ಸಾಧನೆ ಎಂದು ಹೇಳಿದ್ದಾರೆ.
+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments