Monday, December 8, 2025
18.9 C
Bengaluru
Google search engine
LIVE
ಮನೆರಾಜ್ಯ32 ವರ್ಷಗಳ ಪೇಚಾಟ... ತನ್ನವರಿಗಾಗಿ ಅಲೆದಾಟ... ಮೈಸೂರಿನಲ್ಲಿ ಸ್ವೀಡನ್ ಮಹಿಳೆಯ ಪರದಾಟ

32 ವರ್ಷಗಳ ಪೇಚಾಟ… ತನ್ನವರಿಗಾಗಿ ಅಲೆದಾಟ… ಮೈಸೂರಿನಲ್ಲಿ ಸ್ವೀಡನ್ ಮಹಿಳೆಯ ಪರದಾಟ

ಮೈಸೂರು : ಹೆತ್ತವರಿಂದ ದೂರವಾದವರಿಗೆ ಗೊತ್ತು, ಆ ನೋವು ಏನು ಅಂತ. ಇಲ್ಲೊಂದು ಮಹಿಳೆಯ ಕಥೆ ನೋಡಿದ್ರೆ ಅಯ್ಯೋ ಪಾಪ ಅನ್ಸುತ್ತೆ. ಹೌದು, ಈಕೆ ಬೆಳೆದಿದ್ದೆಲ್ಲಾ ದೂರದ ಯುರೋಪ್ನಲ್ಲಿ. ಹೌದು, ಸ್ವೀಡನ್ನಲ್ಲಿದ್ದ ಈ ಮಹಿಳೆ ಇದೀಗ ಮೈಸೂರಿನಲ್ಲಿ ಅಲೆದಾಡುತ್ತಿದ್ದಾರೆ. ಕಾರಣ ಇಷ್ಟೇ. ತನ್ನ, ಅಪ್ಪ, ಅಮ್ಮ ಯಾರು, ತನ್ನ ಅಣ್ಣ, ತಮ್ಮ, ಅಕ್ಕ, ತಂಗಿ ಯಾರಿರಬಹುದು ಎಂದು ತಿಳಿಯುವ ತವಕ, ಧಾವಂತ. ಬರೋಬ್ಬರಿ 32 ವರ್ಷಗಳ ಬಳಿಕ ತನ್ನ ಹೆತ್ತವರನ್ನು, ಒಡಹುಟ್ಟಿದವರನ್ನು ಹುಡುಕಲು ಈಕೆ ಸಾವಿರಾರು ಕಿ.ಮೀ. ದೂರದ ಸ್ವೀಡನ್ನಿಂದ ಮೈಸೂರಿಗೆ ಬಂದಿದ್ದಾರೆ. ತಮ್ಮವರನ್ನು ಹುಡುಕಲು ಪರದಾಡುತ್ತಿದ್ದಾರೆ.

ಇನ್ನು . ಸ್ವೀಡನ್ ನಿವಾಸಿ ಜಾಲಿ ಸ್ಯಾಂಡ್ ಬರ್ಗ್ ಫ್ಲಾಷ್ ಬ್ಯಾಕ್ ಬಗ್ಗೆ ಹೇಳೋದಾದ್ರೆ, ಜಾಲಿ ಸ್ಯಾಂಡ್ ಬರ್ಗ್ ಅವರನ್ನು ಎಂಟು ವರ್ಷದ ಬಾಲಕಿಯಾಗಿದ್ದಾಗ 1989 ರಲ್ಲಿ ಬೆಂಗಳೂರಿನ ಆಶ್ರಯ ಚಿಲ್ಡ್ರನ್ ಹೋಂ ನಿಂದ ಆಸ್ಟ್ರಿಯಾದ ಕುಟುಂಬವೊಂದು ದತ್ತು ಪಡೆದುಕೊಂಡಿತ್ತು. ಅನಾಥವಾಗಿದ್ದ ಜಾಲಿ ಸ್ಯಾಂಡ್ ಬರ್ಗ್ ಗೆ ಆಗ ಒಂದು ಕುಟುಂಬ ಸಿಕ್ಕಿತ್ತು. ಅಲ್ಲಿಯೇ ಬೆಳೆದು ದೊಡ್ಡವರಾದ ಅವರಿಗೆ ಒಂದು ದಿನ ತಾನು ಆಸ್ಟ್ರೀಯಾದ ಆ ಜೋಡಿಯ ಮಗಳಲ್ಲ ಎಂಬ ವಿಷಯ ಗೊತ್ತಾಯ್ತು. ತನ್ನನ್ನು ಹೆತ್ತವರು ಕರ್ನಾಟಕದವರು ಎಂದು ಗೊತ್ತಾಯಿತು. ಅದಾದ ನಂತರ ಆಕೆ ತನ್ನವರನ್ನು ನೋಡಲೇಬೇಕು ಅಂತ ನಿರ್ಧಾರ ಮಾಡಿದ್ರು.
32 ವರ್ಷಗಳ ಬಳಿಕ ಮೈಸೂರಿಗೆ ಬಂದ ಇವರು ತಮ್ಮ ಮೂಲ ಕುಟುಂಬದ ಹುಡುಕಾಟದಲ್ಲಿದ್ದಾರೆ.
ತಮ್ಮ ತಂದೆ ತಾಯಿಯ ಮಾಹಿತಿ ಕಲೆ ಹಾಕಿದಾಗ ಇವರಿಗೆ ಗೊತ್ತಾಗಿದ್ದು, ತಾನು
ಮೂಲತಃ ಮೈಸೂರು ಜಿಲ್ಲೆಯ ಒಂದು ಕುಟುಂಬದಲ್ಲಿ 1985 ರಲ್ಲಿ ಜನಿಸಿದ್ದಾಗಿ ತಿಳಿಯಿತು. ತಾಯಿ ಮಂಡ್ಯ ಬಳಿಯ ಮದ್ದೂರಿನವರಾಗಿದ್ದು, ಮೈಸೂರಿನ ವ್ಯಕ್ತಿಯೋರ್ವರನ್ನು ವಿವಾಹವಾಗಿದ್ದರು ಎಂಬ ಅಂಶಗಳನ್ನು ಕಲೆ ಹಾಕಿದರು. ಕೂಡಲೇ ಜಾಲಿ ಸ್ಯಾಂಡ್ ಬರ್ಗ್ ಮದ್ದೂರಿನ ಮೂಲವನ್ನು ಹುಡುಕಿ ಹೊರಟರು. ಆಗ ಗೊತ್ತಾಗಿತ್ತು, ತನ್ನನ್ನು ಮದ್ದೂರಿನ ಪ್ರೌಢಶಾಲೆ ಪಕ್ಕದ ಮನೆಯಲ್ಲಿದ್ದ ಜಯಮ್ಮ ಎಂಬುವವರು ಆಶ್ರಯ ಚಿಲ್ಡ್ರನ್ ಹೋಂ ಸಂಸ್ಥೆಗೆ ನೀಡಿದ್ದರೆಂಬುದು ತಿಳಿದುಬರುತ್ತೆ. ಇನ್ನು ಆ ಜಯಮ್ಮರನ್ನು ಭೇಟಿ ಮಾಡಿದ್ರೆ ಇನ್ನಷ್ಟು ಮಾಹಿತಿ ತಿಳಿಬಹುದು ಎಂದು ಜಾಲಿ ಹೋಗ್ತಾರೆ. ಆಕೆ ಈ ಹಿಂದೆಯೇ ಅಸುನೀಗಿದ್ದಾರೆ ಎಂದು ಗೊತ್ತಾಗಿದೆ.

ಜಾಲಿ ಅವರ ತಾಯಿಯ ಹೆಸರು ವಸಂತಮ್ಮ. ತಂದೆ ಆತ್ಮಹತ್ಯೆ ಮಾಡಿಕೊಂಡ ಕಾರಣ ಆಕೆ ಕಷ್ಟದ ಜೀವನ ಸಾಗಿಸುತ್ತಿದ್ದರು. ಹೀಗಾಗಿ ತನ್ನ ಅಜ್ಜಿ ಪರಿಚಿತರಾದ ಜಯಮ್ಮ ಎಂಬುವವರಿಗೆ ತನ್ನನ್ನು ನೀಡಿದ್ದರು. ಆಕೆ ತನ್ನನ್ನು ಬೆಂಗಳೂರಿನ ಮೇರಿ ಕಾನ್ವೆಂಟ್‌ಗೆ ಕರೆತಂದಾಗ ಅಲ್ಲಿಂದ ಆಶ್ರಯ ಚಿಲ್ಡ್ರನ್ ಹೋಂಗೆ ಸ್ಥಳಾಂತರಿಸಲಾಯಿತು ಎಂಬ ಮಾಹಿತಿ ದೊರೆತಿದೆ. ಈಗ ತನಗೆ ತಿಳಿದ ಯಾರೂ ಸಹ ಬದುಕಿಲ್ಲ.
ಇವರಿಗೆ ಸಹೋದರರು, ಸಹೋದರಿಯರು ಇರಬಹುದಾಗಿದ್ದು, ಅವರ ಹುಡುಕಾಟದಲ್ಲಿ ಜಾಲಿ ಸ್ಯಾಂಡ್ ಬರ್ಗ್ ಇದ್ದಾರೆ. ಅವರನ್ನ ಹುಡುಕಿ ಮೈಸೂರಿಗೆ ಬಂದಿದ್ದಾರೆ. ತನ್ನ ಕುಟುಂಬಸ್ಥರನ್ನ ನೋಡಬೇಕೆಂದು ಹಂಬಲಿಸುತ್ತಿದ್ದಾರೆ. ಇದಕ್ಕೆ ಅವರ ಪತಿ ಸಹ ಸಹಕಾರ ನೀಡಿದ್ದಾರೆ. ಅಂಜಲಿ ಪವಾರ್ ಹಾಗೂ ಎಡಿನ್ ಅವರು ಜಾಲಿ‌ ಅವರಿಗೆ ನೆರವಾಗುತ್ತಿದ್ದು, ತಮ್ಮವರ ಹುಡುಕಾಟದಲ್ಲಿ ಜಾಲಿ ಮಗ್ನರಾಗಿದ್ದಾರೆ. ಆದಷ್ಟು ಬೇಗ ಜಾಲಿಗೆ ತನ್ನವರು ಸಿಗಲಿ ಎಂದು ಫ್ರೀಡಂ ಟಿವಿ ಹಾರೈಸುತ್ತದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments