ರಾಜ್ಯಸುದ್ದಿ

ಶಾಸಕ ಭರತ್ ರೆಡ್ಡಿ ಕಚೇರಿ ಮೇಲೆ 2 ದಿನವೂ ಇಡಿ ದಾಳಿ

ಬಳ್ಳಾರಿ: ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಇಲ್ಲಿನ ಗಾಂಧಿನಗರದಲ್ಲಿನ ರಾಘವೇಂದ್ರ ಎಂಟರ್ಪ್ರೈಸಸ್ ನ ಪ್ರಧಾನ ಕಚೇರಿ ಮೇಲೆ ನಡೆದಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳ ದಾಳಿ ಎರಡನೇ ದಿನವಾದ ಇಂದೂ ಮುಂದುವರಿದಿದೆ.

ನಿನ್ನೆ ಬೆಳಿಗ್ಗೆ ಆರಂಭವಾದ ದಾಳಿ ಶಾಸಕರ, ಅವರ ಚಿಕ್ಕಪ್ಪ, ಮತ್ತು ಆಪ್ತನ ಮನೆ ಹಾಗು ಕಚೇರಿಗಳ ಮೇಲೆ ದಾಳಿ ೨೪ ತಾಸು ಕಳೆದರೂ ತಪಾಸಣೆ ಮುಂದುವರಿದೆದೆ. ಸಂಜೆ ವೇಳಿಗೆ ಇತರೆಡೆಯ ದಾಳಿಗಳು ಮುಗಿದು ಶಾಸಕರ ಕಾರ್ಪೋರೆಟ್ ಕಚೇರಿ ಮೇಲಿನ ದಾಳಿ ಮಾತ್ರ ಮುಂದುವರೆದಿದೆ.ನಿನ್ನೆ ದಿನವಿಡೀ ನಡೆದ ದಾಳಿಯಲ್ಲಿ ಕಚೇರಿಯ ಕಂಪ್ಯೂಟರ್ ದಾಖಲೆಗಳ ಪರಿಶೀಲನೆ ನಡೆದಿದೆ. ಇಂದು ಭರತ್ ರೆಡ್ಡಿ ಅವರ ಇನ್ನಷ್ಟು ಸಂಬಂಧಿಕರ ಮನೆಗಳಿಗೂ ಇಡಿ ಅಧಿಕಾರಿಗಳು ಲಗ್ಗೆ ಹಾಕಿ ದಾSಲೆಗಳನ್ನು ಜಾಲಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ ಮತ್ತು ಆದಾಯಕ್ಕಿಂತಲೂ ಅಧಿಕ ಆಸ್ತಿ ಸಂಪಾದನೆ ಆರೋಪದ ಹಿನ್ನಲೆ ಈ ಹಿಂದೆ ಐಟಿ ಅಧಿಕಾರಿಗಳ ದಾಳಿ ನಡೆದಿತ್ತು ಅದರ ಮುಂದುವರೆದ ಭಾಗವಾಗಿ ಇಡಿ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.ಇಂದು ಎಂದಿನಂತೆ ಕಚೇರಿ ಸ್ವಚ್ಛತೆಗೆ ಬಂದ ಕೆಲಸಗಾರರನ್ನು ಕೇಂದ್ರದ ಭದ್ರತಾ ಸಿಬ್ಬಂದಿ ವಾಪಸ್ ಕಳುಹಿದೆ. ಶಾಸಕರು ಮನೆಯಲ್ಲಿಯೇ ಇದ್ದರೆ, ಅವರ ತಂದೆ ಸೂರ್ಯನಾರಾಯಣ ರೆಡ್ಟಿ ಅವರು ಕಚೇರಿಯಲ್ಲಿ ಇದ್ದಾರೆ.ಹಲವು ವರ್ಷಗಳಿಂದ ಗ್ರಾನೈಟ್ ಉದ್ಯಮ ಮಾಡಿಕೊಂಡು ನೂರಾರು ಕೋಟಿ ಆಸ್ತಿ ಹೊಂದಿದ್ದಾರೆ. ಆಂಧ್ರ ಪ್ರದೇಶದ ವಿವಿಧೆಡೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಗ್ರಾನೈಟ್ ಕ್ವಾರಿಗಳನ್ನು ಹೊಂದಿದ್ದಾರೆ.

https://www.youtube.com/watch?v=UcGZvGU77SA

Comments (0)

Your email address will not be published. Required fields are marked *

Back to top button