ಜಿಲ್ಲೆಧರ್ಮರಾಜಕೀಯ

Kolar MLA Kottur Manjunath | ಮೋದಿ ಉಪವಾಸ ಇದ್ರಾ.? ಇಲ್ವಾ.? | ಸಿಟ್ಟಾಗಿದ್ದೇಕೆ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್.?

ಕೋಲಾರ :  ರಾಮ ಮಂದಿರ ಪ್ರತಿಷ್ಠಾಪನೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪವಾಸ ಇದ್ರಾ.? ಇಲ್ಲವಾ ಅಂತ ನಾನು ನೋಡಿದ್ದಿನಾ..? ಅಥವಾ ನೀವು ನೋಡಿದ್ದಿರ ಹೇಳಿ.? ಯಾರು ನೋಡಿಲ್ಲ. ಜನರು ಮಾತಾಡುವುದನ್ನು ನಾವು ಕೇಳಿದ್ದೇವೆ. ಅಭಿವೃದ್ಧಿ ಕಡೆ ನಮ್ಮ ಗಮನ ಇರಬೇಕೆ ಹೊರೆತು ಬೇರೆ ವಿಚಾರಗಳ ಮೇಲೆ ಅಲ್ಲ ಎಂದು ಶಾಸಕ‌ ಕೊತ್ತೂರು ಮಂಜುನಾಥ್ ಹೇಳಿದ್ದಾರೆ.

ಕೋಲಾರ ತಾಲೂಕಿನ ವೇಮಗಲ್ ಪಟ್ಟಣ ಪಂಚಾಯಿತಿಯಲ್ಲಿ ಇಂದಿರಾ ಕ್ಯಾಂಟೀನ್ ಗೆ ಗುದ್ದಲಿ ಪೂಜೆ ನೇರವೆರಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ಮೋದಿಯವರು ಉಪವಾಸ ಇದ್ರಾ.? ಇಲ್ವಾ ಅಂತ ಯಾರು ನೋಡಿಲ್ಲ. ನಮ್ಮ ಕೆಲಸ ನಮ್ಮ ಅಭಿವೃದ್ಧಿ ಏನು ಎಂಬುದನ್ನು ಮೊದಲು ತಿಳಿದುಕೊಳ್ಳ ಬೇಕು. ಬಾಯಿ ಮುಚ್ಚಿಕೊಂಡು ಸುಮ್ಮನೆ ಇರಬೇಕು. ಯಾರ ಬಗ್ಗೆಯೂ ಸಹ ಕಮೆಂಟ್ ಗಳನ್ನು ಮಾಡಬಾರದು. ನನ್ನ ಜೊತೆ ಇರುವವರು ನನ್ನನ್ನು ಓವರ್ ಟೇಕ್ ಮಾಡುವುದಕ್ಕೆ ಯಾರಿಂದಲು ಸಹ ಸಾಧ್ಯವಿಲ್ಲ ಎಂದು ಕಿಡಿಕಾರಿದ್ರು.

ನಾನು ಜನರಿಗೆ ಬೆಳಕಾಗುತ್ತೇನೆ, ಬೆಂಕಿಯಾಗುವುದಿಲ್ಲ. ನಾನು ಹೊಸದಾಗಿ ಎಂಎಲ್ ಎ ಆಗಿಲ್ಲ. ನಾನು ಚಿಕ್ಕ ಮಗು ಸಹ ಅಲ್ಲ. 20 ವರ್ಷಗಳಿಂದ 4 ಅಸ್ಲೆಂಬಿ ಹಾಗೂ 4 ಪಾರ್ಲಿಮೆಂಟ್ ಎಲೆಕ್ಷನ್ ಮಾಡಿದ್ದೇನೆ. ಎರಡನೇ ಬಾರಿಗೆ ಎಂಎಲ್‌ಎ ಆಗಿದ್ದೇನೆ. ನನ್ನನ್ನು ಓವರ್ ಟೆಕ್ ಮಾಡುವುದಕ್ಕೆ ಯಾರು ಬರುವುದಿಲ್ಲ, ಸದಾ ಜನರ ಜೊತೆಗೆ ಇರುತ್ತೇನೆ. ಆದರೆ ಅಭಿವೃದ್ಧಿ ಕೆಲಸಗಳು ಸಹ ಮುಖ್ಯವಾಗಿರುವುದರಿಂದ ವಾರದಲ್ಲಿ ಎರಡು ಮೂರು ದಿನ ಜನರ ಬಳಿ ಬರುತ್ತೇನೆ. ಉಳಿದಂತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವರು , ಅಧಿಕಾರಿಗಳನ್ನು ಭೇಟಿಯಾಗಿ ಮಾತನಾಡಬೇಕಾಗುತ್ತದೆ. ಎರಡೂ ಕೆಲಸಗಳನ್ನು ಒಟ್ಟಾಗಿ ಮಾಡಿಕೊಂಡು ಹೋಗುತ್ತೇನೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದ್ದಾರೆ.

 

Comments (0)

Your email address will not be published. Required fields are marked *

Back to top button