ಹಾನಿಕಾರಕವಾದ ಮಯೋನಿಸ್ ಅನ್ನು ನಿಷೇಧ ಮಾಡಿದ ತೆಲಂಗಾಣ ಸರ್ಕಾರ!

ಹೈದರಾಬಾದ್: ಪಿಜ್ಜಾ ಸೇರಿದಂತೆ ಬಹುತೇಕ ಪಾಶ್ಚಿಮಾತ್ಯ ಖಾದ್ಯಗಳ ಜೊತೆ ಬಳಸುವ ಮಯೋನಿಸ್ಗೆ ತೆಲಂಗಾಣ ಸರ್ಕಾರ 1 ವರ್ಷ ನಿಷೇಧ ಹೇರಿದೆ. ಮೊಟ್ಟೆ ಮತ್ತು ಎಣ್ಣೆಯನ್ನು ಬಳಸಿ ತಯಾರಿಸುವ ಮಯೋನೀಸ್ನಿಂದ ಫುಡ್ ಪಾಯ್ಸನಿಂಗ್ ದೂರುಗಳು ಪತ್ತೆಯಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆಹಾರ ಭದ್ರತೆ ಮಂಡಳಿ ತಿಳಿಸಿದೆ. ಇತ್ತೀಚೆಗಷ್ಟೇ ಹೈದರಾಬಾದ್ನಲ್ಲಿ ಓರ್ವ ಮಹಿಳೆ ಮೋಮೋಸ್ ಸೇವಿಸಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಹಲವೆಡೆ ದಾಳಿ ನಡೆಸಿ ಈ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ. ಈ ಘಟನೆ ಬೆನ್ನಲ್ಲೇ ಹೈದರಾಬಾದ್ನ ಹಲವು ಬೀದಿ ಬದಿ ಅಂಗಡಿ, ಮೋಮೊಸ್ ಮಳಿಗೆ, ಶವರ್ಮಾ ಹೋಟೆಲ್ ಸೇರಿ ಹಲವು ಆಹಾರ ಮಳಿಗೆಗಳ ಮೇಲೆ ದಾಳಿ ನಡೆಸಿ ಇನ್ನು 20 ಭಾದಿತರನ್ನು ಗುರುತಿಸಿದೆ. ಬಳಿಕ ಬುಧವಾರದಿಂದಲೇ ಜಾರಿಗೆ ಬರುವಂತೆ ಹೊರಡಿಸಿದೆ. ಆದೇಶ ಇತ್ತೀಚೆಗೆ ಗೋಬಿ ಮಂಚೂರಿಗೆ ಬಳಸುವ ಬಣ್ಣದಲ್ಲಿ ಕ್ಯಾನ್ಸರ್ಕಾರಕ ಅಂಶ ಪತ್ತೆಯಾದ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಕಬಾಬ್, ಗೋಬಿಗೆ ಬಣ್ಣವನ್ನು ನಿಷೇಧಿ ಸಿತ್ತು. ಬಳಿಕ ಗೋಲ್ಗಪ್ಪ ,ಪಾನಿಗೆ ಬಳಸುವ ಬಣ್ಣಕ್ಕೂ ನಿಷೇಧ ಹೇರಿದೆ.




