#Exclusive NewsTop Newsಫ್ರೀಡಂ ಟಿವಿ ವಿಶೇಷವಿಶೇಷಸಿನಿಮಾಸುದ್ದಿ

ಡಾಲಿಗೆ ಕೂಡಿ ಬಂತು ಕಂಕಣ ಭಾಗ್ಯ ! ಹಸೆಮಣೆ ಏರೋದು ಯಾವಾಗ ? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು:ಸೂಪರ್ ಹಿಟ್ ಚಿತ್ರದ ಮೂಲಕ ಅಭಿಮಾನಿಗಳ ಮನಗೆದ್ದಿರುವ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ವೈವಾಹಿಕ ಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ. ಡಾಲಿ ಮನಸ್ಸು ಕದ್ದ ಹುಡುಗಿ ಯಾರು ಅನ್ನೋದು ಬಹಿರಂಗವಾಗಿದೆ. ಬಹು ಕಾಲದ ಗೆಳತಿ ಧನ್ಯಾತಾ ಜೊತೆ ಡಾಲಿ ಧನಂಜಯ್ ಮದುವೆಯಾಗುತ್ತಿದ್ದಾರೆ. ವೈದ್ಯೆಯಾಗಿರುವ ಧನ್ಯತಾ ಮೂಲತ: ಚಿತ್ರದುರ್ಗದವರು. ಕಳೆದ ಕೆಲ ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

38ರ ಹರೆದ ಡಾಲಿ ಧನಂಜಯ್ ಮದುವೆ ಕುರಿತು ಹಲವು ವೇದಿಕೆಗಲ್ಲಿ ಚರ್ಚೆಯಾಗಿದೆ. ನಟ ನಟಿಯರು, ಕಟುಬಸ್ಥರು ಡಾಲಿ ಬಳಿ ಮದುವೆ ಯಾವಾಗ ಅನ್ನೋ ಪ್ರಶ್ನೇ ಕೇಳುತ್ತಲೇ ಬಂದಿದ್ದಾರೆ. ಈ ವೇಳೆ ಕಂಕಣ ಭಾಗ್ಯ ಕೂಡಿ ಬರಬೇಕು ಎನ್ನುತ್ತಿದ್ದ ನಟ, ಪ್ರೀತಿ ವಿಚಾರ ಗೌಪ್ಯವಾಗಿಟ್ಟಿದ್ದರು. ಎಲ್ಲೂ ಕೂಡ ಧನ್ಯತಾ ಜೊತೆಗಿನ ಪ್ರೀತಿ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಇದೀಗ ದೀಪಾವಳಿ ಹಬ್ಬದ ದಿನ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ. ಧನ್ಯತಾ ಜೊತೆ ಫೋಟೋಶೂಟ್ ಮಾಡಿಸಿಕೊಂಡಿರುವ ಡಾಲಿ ಧನಂಜಯ್ ಅಧಿಕೃತವಾಗಿ ತಮ್ಮ ಪ್ರೀತಿ ಹಾಗೂ ಮದುವೆ ಘೋಷಿಸಿದ್ದಾರೆ.

ಡಾಲಿ ಧನಂಜಯ್ ಹಾಗೂ ವೈದ್ಯೆ ಧನ್ಯತಾ ಕೆಲ ವರ್ಷಗಳಿಂದ ಸ್ನೇಹಿತರಾಗಿದ್ದರು. ಈ ಸ್ನೇಹ ಪ್ರೀತಿಗೆ ತಿರುಗಿತ್ತು. ಇದೀಗ ಈ ಪ್ರೀತಿ ಮದುವೆಯ ಅರ್ಥ ಪಡೆಯುತ್ತಿದೆ. ಇವರಿಬ್ಬರ ಪ್ರೀತಿಯನ್ನು ಎರಡು ಕುಟುಂಬದವರು ಒಪ್ಪಿದ್ದಾರೆ. ಕುಟುಂಬದ ಹಿರಿಯರು ಮಾತುಕತೆ ನಡೆಸಿದ್ದು, ಫೆಬ್ರವರಿಯಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಧನ್ಯಾತಾ ಗೈನಾಕಾಲಿಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

 

Comments (0)

Your email address will not be published. Required fields are marked *

Back to top button