#Exclusive NewsTop Newsಫ್ರೀಡಂ ಟಿವಿ ವಿಶೇಷವಿಶೇಷವೈರಲ್ ನ್ಯೂಸ್ಸಿನಿಮಾಸುದ್ದಿ
ದರ್ಶನ್ ತಪ್ಪು ಮಾಡಿರೋದು ನಿಜ-ಎನ್ ಎಂ ಸುರೇಶ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿ ಆಧ್ಯಕ್ಷ ಎನ್ ಎಂ ಸುರೇಶ್ ಫ್ರೀಡಂ ಟಿವಿಗೆ ಪ್ರತಿಕ್ರಿಯೇ ನೀಡಿದ್ದು, ತಪ್ಪು ಮಾಡಿರೋದು ನಿಜ. ಇನ್ನು ದರ್ಶನ್ ಅವರನ್ನು ಬ್ಯಾನ್ ಮಾಡೋದು ಅಥವಾ ಬೇಡವಾ ಅನ್ನೋದು ನಾವು ನಿರ್ಧಾರ ಮಾಡುವುದಿಲ್ಲ. ಕೋರ್ಟ್ ಏನು ನಿರ್ಧಾರ ಮಾಡುತ್ತದೋ ಅದನ್ನು ನಾವು ಪಾಲಿಸುತ್ತೇವೆ. ಸದ್ಯ ಈಗಲೇ ನಾವು ಈ ಬಗ್ಗೆ ಹೆಚ್ಚಾಗಿ ಏನನ್ನು ಹೇಳಲು ಆಗುವುದಿಲ್ಲ ಎಂದು ಪ್ರತಿಕ್ರಿಯೇ ನೀಡಿದ್ದಾರೆ. ಇನ್ನು ಇದೇ ವೆಳೆ ನಿರ್ಮಾಪಕ ಸಾರಾ ಗೋವಿಂದ್ ಮಾತನಾಡಿದ್ದು, ದರ್ಶನ್ ಕಾನೂನು ಕೈಗೆ ತಗೋಬಾರ್ದಿತ್ತು, ಇದಕ್ಕೆ ಒಂದು ವ್ಯವಸ್ಯಿದೆ ಹಾಗೆ ಪಾಲಿಸಬೇಕಿತ್ತು ಎಂದು ಪ್ರತಿಕ್ರಿಯೇ ನಿಡಿದ್ದಾರೆ.





