ಧರ್ಮರಾಜ್ಯಸುದ್ದಿ

ಜುಮ್ಮಾ ಮಸೀದಿಗೆ ಹೊಳೆ ಹುಚ್ಚೇಶ್ವರ ಶ್ರೀಗಳು ಭೇಟಿ

ಬಾಗಲಕೋಟೆ : ಇತ್ತೀಚಿನ ದಿನಗಳಲ್ಲಿ ಧರ್ಮದಂಗಲ ಹೆಚ್ಚಾಗಿತ್ತಿರುವುದರ ನಡುವೆ ಕಮತಗಿಯ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ಹುಚ್ಚೇಶ್ವರ ಸ್ವಾಮಿಯವರು ಜುಮ್ಮಾ ಮಸೀದಿಗೆ ಭೇಟಿ ನೀಡುವುದರ ಮೂಲಕ ಸೌಹಾರ್ದತೆ ಮೆರೆದಿದ್ದಾರೆ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬದ ಜಾಗರಣೆಯ ದಿನ ರಾತ್ರಿ ಕಮತಗಿಯ ಜುಮ್ಮಾ ಮಸೀದಿಗೆ ಭೇಟಿ‌ ನೀಡುವ ಮೂಲಕ ಸೌಹಾರ್ದತೆ ಮಾತುಗಳ ನಾಡಿದ ಹುಚ್ಚೇಶ್ವರ ಸ್ವಾಮೀಜಿ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ 13ನೇ ಪೀಠಾಧಿಪತಿ ಹುಚ್ಚೇಶ್ವರ ಸ್ವಾಮೀಜಿಯವರು ಪ್ರತಿ ವರ್ಷ ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ಆವರಣದಲ್ಲಿ ವ್ಯಾಪ್ತಿಯಾ ಕೂಟವನ್ನು  ಯೋಜನೆ ಮಾಡುತ್ತಾರೆ.

ಇದು ಇಡೀ ಸಮಾಜಕ್ಕೆ ಮಾದರಿಯಾಗುವಂತಹ ಹಾಗೂ ಸಮಾಜದಲ್ಲಿ ಭಾವೈಕ್ಯತೆ ಸಾರುವಂತಹ ಕೆಲಸವನ್ನ ಶ್ರೀಗಳು ಮಾಡುತ್ತಲೇ ಬಂದಿದ್ದಾರೆ ಶನಿವಾರ ರಾತ್ರಿ ಕಮತಗಿ ಪಟ್ಟಣದ ಜುಮ್ಮಾ ಮಸೀದಿಗೆ ಭೇಟಿ ನೀಡಿದ್ದ ಸ್ವಾಮೀಜಿಗಳಿಗೆ ಮುಸ್ಲಿಂ ಸಮುದಾಯದವರು ಗೌರವ ಸಲ್ಲಿಸಿದರು.

ಬಳಿಕ ಮಾತನಾಡಿದಸ್ವಾಮೀಜಿ ಎಲ್ಲವನ್ನು ಮೀರಿ ನಿಂತಿರುವ ಬಾಂಧವ್ಯ ಇರುವುದು ನಮ್ಮ ಭಾರತದಲ್ಲಿ ಕರ್ನಾಟಕದಲ್ಲಿ ಭಾವೈಕ್ಯತೆಯ ಮಠಗಳು ಸಾಕಷ್ಟು ಇವೆ ಶಿರಟ್ಟಿಯ ಫಕೀರೇಶ್ವರ ಮಠದಲ್ಲಿ ಕೆಳಗಡೆ ಗದ್ದುಗೆ ಇದೆ, ಮೇಲಗಡೆ ಮಸೀದಿ ಇದೆ,ಸಾವಳಗಿ ಶಿವಲಿಂಗೇಶ್ವರದಲ್ಲಿ ಭಾವೈಕ್ಯತೆ ನಮ್ಮ ಕಮತಗಿಯಲ್ಲಿ ಭಾವೈಕ್ಯತೆ ಎಲ್ಲಿ ಹುಚ್ಚೇಶ್ವರ ಮಠಗಳು ಇವೆಯೇಯೂ ಅಲ್ಲೆಲ್ಲಾ ಭಾವೈಕ್ಯತೆ ನೆಲೆಸಿದೆ,ಎಂದು ಹೇಳಿದರು,ಈ ಜಾಗರಣೆಯಲ್ಲಿ ಹಿರಿಯರು,ಕಿರಿಯರು ಎನ್ನದೆ ನೂರಾರು ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.

Comments (0)

Your email address will not be published. Required fields are marked *

Back to top button