ರಾಜ್ಯಸುದ್ದಿ

ಬೆಳಗಾವಿಯಲ್ಲಿ ರೈತರ ಉರುಳು ಸೇವೆ

ಬೆಳಗಾವಿಯಲ್ಲಿ ರೈತರು ಕೆರಳಿದ್ದು, ಉರಳು ಸೇವೆ ಮಾಡಿ ಅಧಿಕಾರಿಗಳ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ಮೂಲಕ ತೆರಳಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಹಲಗಾ ಮಚ್ಛೆ ಬೈಪಾಸ್ ರಸ್ತೆಯಲ್ಲಿ ರೈತರ ಜಮೀನನ್ನ ಬರಡು ಮಾಡಲಾಗಿದೆ ಎಂದು ಆರೋಸಿದ ರೈತರು, ಬೆಳಗಾವಿ ತಹಶಿಲ್ದಾರ ವಿರುದ್ದ ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಹಲಗಾ ಮಚ್ಚೆ ಬೈಪಾಸ ರಸ್ತೆ ರದ್ದು ಮಾಡುವಂತೆ ಆಗ್ರಹಿಸಿದರು.

Comments (0)

Your email address will not be published. Required fields are marked *

Back to top button