#Exclusive Newsಸುದ್ದಿ

ಬಿಡಿಎನಲ್ಲಿ ಮತ್ತೆರೆಡು ಬಳಿಯಾನೆಯಂಥ ಹುದ್ದೆಗಳು ಸೃಷ್ಟಿ

ಕೆಎಎಸ್​ ಅಧಿಕಾರಿಗಳಿಗೆ ಅದೇನೋ ಗೊತ್ತಿಲ್ಲ. ಬಿಡಿಎ ಅಂದರೇ ಪಂಚಪ್ರಾಣ. ಬಿಡಿಎನಲ್ಲಿ ಕಾರ್ಯದರ್ಶಿ ಹಾಗೂ ಉಪ ಅಯುಕ್ತರ ಹುದ್ದೆಯನ್ನು ಪಡೆಯಬೇಕಂತ ಎಂತ ಲಾಬಿಯಾದ್ರೂ ಮಾಡ್ತಾರೆ. ಕಾರ್ಯದರ್ಶಿ ಹಾಗೂ ಉಪ ಅಯುಕ್ತರ ಹುದ್ದೆಗೆ ಕೋಟಿ ಕೋಟಿ ಸುರಿದು ಹುದ್ದೆ ಪಡೆದುಕೊಳ್ಳಲು ಮುಂದಾಗುತ್ತಾರೆ. ಚೆನ್ನಾಗಿ ದುಡ್ಡು ಮಾಡಬಹುದು ಅಂತಾ ಲಾಬಿ ಶಿಫಾರಸ್ಸುಗಳನ್ನು ಮಾಡಿ ಬಿಡಿಎಗೆ ಎಂಟ್ರಿ ಕೊಡ್ತಾರೆ. ಆದ್ರೆ ಇಂತಹ ಹುದ್ದೆಗಳಿಗೆ ಎರಡೆರಡು ಹುದ್ದೆಗಳನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ. ಆರ್ಥಿಕ ಸಂಕಷ್ಟದಲ್ಲೂ ಬಿಡಿಎನಲ್ಲಿ ದಿಢೀರ್​ ಅಂತ ಕಾರ್ಯದರ್ಶಿ ಹಾಗೂ ಉಪ ಆಯುಕ್ತ ಬಿಳಿಯಾನೆಯಂಥ ಹುದ್ದೆಗಳನ್ನು ಸರ್ಕಾರ ಸೃಷ್ಟಿಸಿದೆ. ಸರ್ಕಾರದ ಬೊಕ್ಕಸಕ್ಕೆ ಲಕ್ಷ ಲಕ್ಷ ನಷ್ಟವಾದ್ರೂ ಕೆಲಸದ ಒತ್ತಡ ಆಧಾರದ ಮೇಲೆ ಒಂದೇ ಹುದ್ದೆಗೆ ಎರಡೆರಡು ಹಿರಿಯ ಕೆಎಎಸ್​ ಅಧಿಕಾರಿಗಳನ್ನ ನೇಮಕ ಮಾಡಿದೆ.

ಸದ್ಯ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಹಾಲಿ ಕಾರ್ಯದರ್ಶಿಯಾಗಿ ಹಿರಿಯ ಕೆಎಎಸ್​ ಅಧಿಕಾರಿ ಶಾಂತರಾಜ್​ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೆಯೇ ಭೂ ಸ್ವಾಧೀನ ವಿಭಾಗದಲ್ಲೂ ಉಪ ಆಯುಕ್ತೆಯಾಗಿ ಸೌಜನ್ಯ ಕೆಲಸ ಮಾಡುತ್ತಿದ್ದಾರೆ. ಬಿಡಿಎನಲ್ಲಿ ಕಾರ್ಯದರ್ಶಿ ಕೆಲಸ ಸೈಟ್​​ ಹಂಚಿಕೆ, ಫ್ಲಾಟ್​ ಹಂಚಿಕೆ ಮಾಡೋದು ಉಪ ಆಯುಕ್ತರ ಕೆಲಸ. ಬಡಾವಣೆಗಳಿಗೆ ಭೂ ಸ್ವಾಧೀನ ಪಡೆದುಕೊಳ್ಳೋದು, ರೈತರಿಗೆ ಭೂ ಪರಿಹಾರ ಕಲ್ಪಿಸೋದು ಅವರ ಕೆಲಸ. ಸದ್ಯ ಬಿಡಿಎನಲ್ಲಿ ಯಾವುದೇ ಹೊಸ ಬಡಾವಣೆ ಮಾಡ್ತಿಲ್ಲ. ಹೊಸ ಫ್ಲಾಟ್​ ನಿರ್ಮಾಣ ಯೋಜನೆಗೆ ಕೈ ಹಾಕುತ್ತಿಲ್ಲ. ಈ ನಡುವೆಯೂ ಸರ್ಕಾರ ಹೊಸ ಹುದ್ದೆಗಳನ್ನು ಸೃಷ್ಟಿಸಿ ಆದೇಶಿಸಿದೆ.

ಬಿಡಿಎನಲ್ಲಿ ಆಯುಕ್ತರನ್ನು ಹೊರತುಪಡಿಸಿದರೆ ಅತೀ ಹೆಚ್ಚು ಅಧಿಕಾರ ಇರೋದೇ ಕಾರ್ಯದರ್ಶಿ ಹಾಗೂ ಉಪ ಆಯುಕ್ತರಿಗೆ. ಆದ್ರೆ ಇದೀಗ ಇಂತಹ ಹುದ್ದೆಗಳಿಗೆ ಮತ್ತೆರೆಡು ಹಿರಿಯ ಕೆಎಎಸ್​ ಅಧಿಕಾರಿಗಳನ್ನು ನೇಮಕ ಮಾಡಿ, ಅಧಿಕಾರ ವಿಕೇಂದ್ರೀಕರಣ ಮಾಡಿ ಆದೇಶಿಸಿದೆ. ಸರ್ಕಾರ ಆದೇಶಿಸಿದ ಬೆನ್ನಲ್ಲೆ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕಾರ್ಯದರ್ಶಿ ಹಾಗೂ ಉಪ ಆಯುಕ್ತರು ಅಧಿಕಾರ ವಿಕೇಂದ್ರಿಕರಣ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ಆದೇಶಿಸಿದ ಬೆನ್ನಲ್ಲೆ ಹಿರಿಯ ಕೆಎಎಸ್​​  ಅಧಿಕಾರಿ ಮಂಜುನಾಥ್​ ಅವರನ್ನು ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿದೆ. ಇದು ಹಾಲಿ ಕಾರ್ಯದರ್ಶಿಅಸಮಾಧಾನಕ್ಕೆ ಕಾರಣವಾಗಿದೆ. ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಬಿಡಿಎಗೆ ಹೆಚ್ಚುವರಿ ಹುದ್ದೆಗಳು ಸೃಷ್ಟಿ ಮತ್ತಷ್ಟು ಸಂಕಷ್ಟವನ್ನು ತಂದೊಡ್ಡುವ ಸಾಧ್ಯತೆ ಇದೆ. ಬಿಡಿಎ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎರಡೆರಡು ಕಾರ್ಯದರ್ಶಿ, ಉಪ ಆಯುಕ್ತರ ಹುದ್ದೆ ಸೃಷ್ಟಿಯಾಗಿರೋದು ಭಾರೀ ಚರ್ಚೆಗೆ ಗ್ರಾಸವಾಗಿದೆ.

Comments (0)

Your email address will not be published. Required fields are marked *

Back to top button