Top Newsಜಿಲ್ಲೆರಾಜ್ಯಸುದ್ದಿಹಣಕಾಸು

ಹಿಂದುಳಿದ ಕೂಡ್ಲಿಗಿ ಅಭಿವೃದ್ಧಿ ಯಾವಾಗ.?

ವಿಜಯನಗರ:ಇದು ಅತ್ಯಂತ ಹಿಂದುಳಿದ ತಾಲೂಕು.ಈ ತಾಲೂಕಿಗೆ ಇದುವರೆಗೆ ಮಾಡಿದ ಕೆಲಸಗಳು ಹಲವು, ಆದ್ರೂ ಇದುವರೆಗೆ ಅತ್ಯಂತ ಹಿಂದುಳಿದ ತಾಲೂಕು,ಈ ತಾಲೂಕಿಗೆ ಈಗ 553 ಕೋಟಿ ಅನುದಾನ ತಂದು,
ಅಭಿವೃದ್ಧಿ ಮಾಡಿ, ವಿರೋಧಿಗಳಿಗೆ ಟಕ್ಕರ್ ಕೊಡ್ತಿನಿ ಅಂತ ಶಾಸಕರು ಹೇಳುತ್ತಾರೆ. ಕೆಲವು ಕಾಮಗಾರಿಗಳಿಗೆ ಚಾಲನೆ ಕೊಡುತ್ತಿದ್ದಾರೆ.ಅದ್ರೆ ಇದು ಸಾಕಾಗುತ್ತಿಲ್ಲ ಅಂತ ಜನ ಭಾವಿಸುತ್ತಿದ್ದಾರೆ.ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಅಭಿವೃದ್ಧಿಗೆ ವೇಗ ಬೇಕಿದೆ ಅಂತ ಸಾಮಾನ್ಯ ಜನರು ಪ್ರಶ್ನೆ ಮಾಡ್ತಿದ್ದಾರೆ. ಸರಿಯಾದ ಆರೋಗ್ಯ, ಶಿಕ್ಷಣ ಸೇವೆ, ಮೂಲಭೂತ ಸೌಕರ್ಯಗಳು ಬೇಕಾಗಿವೆ ಎಂಬ ಕೂಗಿದೆ.

ರಾಜ್ಯದಲ್ಲಿ ಬೇಸಿಗೆ ಇದೆ. ಕುಡಿಯುವ ನೀರಿಲ್ಲ, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸೋ ಕೆಲಸ ಮಾಡಬೇಕಿದೆ.ಅದ್ರೆ ಗ್ಯಾರಂಟಿಗಳ ಗೊಂದಲದಲ್ಲಿ ವಿಜಯನಗರದ ಕೂಡ್ಲಿಗಿ ಅಭಿವೃದ್ಧಿ ಕುಂಠಿತವಾಗುತ್ತೆ ಅನ್ನಿಸುತ್ತಿದೆ.ಗ್ಯಾರಂಟಿಗಳಿಗೆ ಹಣ ಜೋಡಿಸೋ ಸರ್ಕಾರ ಕೂಡ್ಲಿಗಿ ಅಭಿವೃದ್ಧಿ ಮಾಡುತ್ತಾ ಅನ್ನೋ ಪ್ರಶ್ನೆ ಎದ್ದಿದೆ.

ಇನ್ನು ವಿಜಯನಗರದ ಕೂಡ್ಲಿಗಿಯ ಬರಪೀಡಿತ ಪ್ರದೇಶ ಅನ್ನೋ ಹಣೆಪಟ್ಟಿಯನ್ನು ತೊಡೆದು ಹಾಕುತ್ತೇನೆ ಅಂತಾ ಶಾಸಕ ಎನ್ ಟಿ ಶ್ರೀನಿವಾಸ್ ಹೇಳುತ್ತಿದ್ದಾರೆ. ಇದು ನಿಜವಾಗುತ್ತಾ ಕಾದು ನೋಡಬೇಕಿದೆ.

Comments (0)

Your email address will not be published. Required fields are marked *

Back to top button