ಶಬರಿಮಲೆ: ಕೇರಳದ ಪ್ರಸಿದ್ದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ಬುಧವಾರ ಪಾರ್ಥನೆ ಸಲ್ಲಿಸಿದರು.
ತಿರುವನಂತಪುರಂ: ರಾಷ್ಟ್ರಪತಿ ದೌಪದಿ ಮುರ್ಮು ಕೇರಳದ ಪ್ರಸಿದ್ದ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ.. ಕೇರಳ ಪ್ರವಾಸದಲ್ಲಿರುವ ಮುರ್ಮು ಅವರು ಶಬರಿಮಲೆಗೆ ಇರುಮುಡಿ ಕಟ್ಟು ಹೊತ್ತು ಅಯ್ಯಪ್ಪ ಸ್ವಾಮಿಯ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.. ಈ ಮೂಲಕ ಶಬರಿಮಲೆಗೆ ಭೇಟಿ ನೀಡಿದ ಮೊದಲ ಹಾಲಿ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ಇನ್ನು ದೇವಸ್ಥಾನದ ತಂತ್ರಿ ಕಂದರಾರು ಮಹೇಶ್ ಮೊಹನಾರು ಅವರು ರಾಷ್ಟ್ರಪತಿಗೆ ಪೂರ್ಣಕುಂಭ ಸ್ವಾಗತ ನೀಡಿದರು. ತಲೆಯ ಮೇಲೆ ಇರುಮುಡಿ ಹೊತ್ತು ದರ್ಶನ ಪಡೆದ ಬಳಿಕ, ದೇಗುಲದ ಮೆಟ್ಟಿಲಿನಲ್ಲಿ ಇರುಮುಡಿ ಇರಿಸಿದರು. ನಂತರ ಮೇಲ್ಮಾಂತಿ ಪೂಜೆಗಾಗಿ ಅವರ ಇರುಮುಡಿಕಟ್ಟು ಸ್ವೀಕರಿಸಿದರು.
ದರ್ಶನದ ಬಳಿಕ ಮಲಿಕಾಪುರಂ ಸೇರಿದಂತೆ ಹತ್ತಿರದ ದೇವಾಲಯಗಳಿಗೆ ಭೇಟಿ ನೀಡಿದರು. ಈ ಸಮಯದಲ್ಲಿ ಭಕ್ತರಿಗೆ ದರ್ಶನಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಟಿಡಿಬಿ ಅಧಿಕಾರಿಗಳು ತಿಳಿಸಿದ್ದಾರೆ.


