ಬೆಂಗಳೂರು: ದೀಪಾವಳಿ ಹಬ್ಬ ಸಂಭ್ರಮ ಎಲ್ಲೆಡೆ ಜೋರಾಗಿಯೇ ನಡೆದಿದೆ. ದೀಪಾವಳಿ ಅಂದ್ರೆ ಸಂಭ್ರಮ. ಸಂಭ್ರಮಕ್ಕೆ ಸಾಕ್ಷಿ ಪಟಾಕಿ. ಆದ್ರೆ ದೀಪಾವಳಿ ಸಂಭ್ರಮಕ್ಕೆ ಹೊಡೆದ ಪಟಾಕಿ ಪ್ರಾಣಿ ಪಕ್ಷಿಗಳಿಗೆ ಭಯವನ್ನೇ ಹುಟ್ಟಿಸಿದೆ.
ರಾಜಧಾನಿಯಲ್ಲಿ ಒಂದು ವಾರದಿಂದ ಸಿಡಿಸಿದ ಪಟಾಕಿ ಸದ್ದು ಪ್ರಾಣಿ ಪಕ್ಷಿಗಳೇ ಕಣ್ಮರೆಯಾಗಿವೆ.ಹೌದು ಯುನೈಟೆಡ್ ಫಾರ್ ಕಂಪ್ಯಾಷನ್ ಸಂಸ್ಥೆ ಪ್ರಕಾರ, ಪಟಾಕಿ ಶಬ್ದಕ್ಕೆ ಹೆದರಿ ತಮ್ಮ ಏರಿಯವನ್ನು ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಹೋಗಿವೆ. ಈ ದೀಪಾವಳಿಯಲ್ಲಿ ನಾಯಿಗಳ ಸುರಕ್ಷತೆ ಮತ್ತು ಅವುಗಳ ಮೇಲಿನ ಪರಿಣಾಮಗಳ ಬಗ್ಗೆ ಮಾನವರು ಅರಿಯುವುದು ಅಗತ್ಯ ಇದೆ ಎಂದು ಹೇಳಿದ್ದಾರೆ.ದೀಪಾವಳಿಯಂದು ಎಲ್ಲರಿಗೂ ಸಂಭ್ರಮ, ಏಕೆಂದರೆ ಪಟಾಕಿ ಸಿಡಿಸಿ (Firecrackers pets)ಅ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಆದರೆ ನಾಯಿಗಳಿಗೆ ಇದು ಭಯದ ದಿನವಾಗಿರುತ್ತದೆ, ಹೌದು ಏಕೆಂದರೆ ಪಟಾಕಿ ಶಬ್ದಕ್ಕೆ ಅವುಗಳು ಎಲ್ಲೋಲು ಓಡಿ ಹೋಗುತ್ತದೆ.
ಪಟಾಕಿಯಿಂದ ತನ್ನ ಬೀದಿ ಬಿಟ್ಟು, ಹಸಿವು ತಡೆದುಕೊಂಡು ಯಾವುದೋ ಸುರಕ್ಷಿತ ಸ್ಥಳವನ್ನು ಹುಡಕಿ ಹೋಗಿವೆ.. ಇದೀಗ ಬೆಂಗಳೂರು ಬೀದಿ ನಾಯಿಗಳ ಪರಿಸ್ಥಿತಿ ಕೂಡ ಅದೇ ಆಗಿದೆ. ಬೆಂಗಳೂರಿನಲ್ಲಿ ಎರಡು ದಿನ ಪಟಾಕಿ ಸಿಡಿಸಿದ ಕಾರಣ ನಾಯಿಗಳು ತಮ್ಮ ಏರಿಯಾ ಬಿಟ್ಟು ಎಲ್ಲೂ ನಾಪತ್ತೆಯಾಗಿದೆ. ಯುನೈಟೆಡ್ ಫಾರ್ ಕಂಪ್ಯಾಷನ್ ಪ್ರತಿನಿಧಿಯ ಪ್ರಕಾರ ವಾಟ್ಸಾಪ್‌ನಲ್ಲಿ ಪ್ರಾಣಿ ಪ್ರಿಯರ ಸಮುದಾಯವಾದ ವಾಯ್ಸ್ ಫಾರ್ ಅವರ್ ವಾಯ್ಸ್‌ಲೆಸ್ ಮೂಲಕ ನಾಲ್ಕು ದಿನಗಳಲ್ಲಿ ಸುಮಾರು ನೂರು ನಾಯಿ ನಾಪತ್ತೆ ಪ್ರಕರಣಗಳು ವರದಿಯಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ .ಶಬ್ದದಿಂದ ಬೀದಿ ನಾಯಿಗಳ ಭಯಗೊಂಡಿದೆ.
ಈ ಬಗ್ಗೆ ನಾವು ಮನುಷ್ಯರು ಅರಿತುಕೊಳ್ಳಬೇಕು ಎಂದು ಯುನೈಟೆಡ್ ಫಾರ್ ಕಂಪ್ಯಾಷನ್ ಹೇಳಿದೆ. ನಾಯಿಗಳು ಪಟಾಕಿ ಶಬ್ದಕ್ಕೆ ಭಯಗೊಂಡು ತನ್ನ ಊರನ್ನು ಬಿಟ್ಟು ಬೇರೆ ಕಡೆ ಹೋಗುತ್ತದೆ, ಆಶ್ರಯಕ್ಕಾಗಿ ಬೀದಿ ಬೀದಿ ಅಲೆಮಾರಿಯಂತೆ ತಿರುಗಾಡುತ್ತದೆ. ಊಟ ಇಲ್ಲದೆ, ಬೇರೆ ನಾಯಿಗಳ ದಾಳಿಗೆ ಒಳಗಾಗುತ್ತದೆ ಎಂದು ಹೇಳಿದ್ದಾರೆ. ರಾಜಾಜಿನಗರದ ನಿವಾಸಿಯೊಬ್ಬರ ಗೋಲ್ಡನ್ ರಿಟ್ರೈವರ್ ನಾಯಿ ಕಣ್ಮರೆಯಾಗಿದೆ. ಸಂಭ್ರಮದ ನಡುವೆ ಇದೊಂದು ದುಃಖಕರ ವಿಚಾರ, ಆ ಶ್ವಾನಕ್ಕಾಗಿ ರಾತ್ರಿ, ಹಗಲು ಎನ್ನದೇ ಹುಡುಕುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಇನ್ನು ಇಂತಹದೇ ಒಂದು ಘಟನೆ ಬನಶಂಕರಿಯಲ್ಲೂ ನಡೆದಿದೆ. ಅಲ್ಲಿಯೂ ಕೂಡ ಲ್ಯಾಬ್ರಡಾರ್ ಶ್ವಾನ ಕಳೆದು ಹೋಗಿತ್ತು. ಆದರೆ ಅದು ಮನೆ ಪಕ್ಕಾದ ಖಾಲಿ ಜಾಗದಲ್ಲಿ ಇತ್ತು ಎಂದು ಹೇಳಿದ್ದಾರೆ. ಇದೀಗ ಅದು ನಮ್ಮ ಕೈ ಸೇರಿದೆ ಎಂದು ನಿವಾಸಿಯೊಬ್ಬರು ಹೇಳಿದ್ದಾರೆ. ಈ ವರ್ಷದ ದೀಪಾವಳಿಯಂದು ನಾಯಿಗಳ ಮೇಲೆ ಪಟಾಕಿಯನ್ನು ಎಸೆದು ಕ್ರೌರ್ಯ ಮೆರೆದಿರುವ ಘಟನೆ ಕಡಿಮೆಯಾಗಿದೆ ಎಂದು ಯುನೈಟೆಡ್ ಫಾರ್ ಕಂಪ್ಯಾಷನ್ ಹೇಳಿದೆ.


