ಬೆಂಗಳೂರು: ಸ್ಯಾಂಡಲ್ ವುಡ್ನ ಸ್ಟಾರ್ ನಟ ಯಶ್ ಅವರ ತಾಯಿ ಪುಷ್ಪ ಅವರ ನಿರ್ಮಾಣದ ಕೊತ್ತಲವಾಡಿ ಸಿನಿಮಾದಲ್ಲಿ ನಟಿಸಿದ್ದ ನಟ ಮಹೇಶ್, ಚಿತ್ರದ ನಿರ್ಮಾಪಕಿಯಾಗಿರುವ ಪುಷ್ಪ ಅವರು ತಮ್ಮ ಸಂಭಾವನೆಯನ್ನು ಪಾವತಿಸದೇ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಹೇಶ್ ಈ ಕುರಿತು ವಿಡಿಯೋ ಬಿಡುಗಡೆ ಮಾಡಿದ್ದಾರೆ, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊತ್ತಲವಾಡಿ ಚಿತ್ರದಲ್ಲಿ ನಾಯಕ ಪೃಥ್ವಿ ಅಂಬರ್ ಜೊತೆಗೆ ಸಹ ನಟನಾಗಿ ಕಾಣಿಸಿಕೊಂಡಿದ್ದ ಮಹೇಶ್ ಅವರನ್ನು ನಿರ್ದೇಶಕ ಶ್ರೀರಾಜ್ ಆಯ್ಕೆ ಮಾಡಿದ್ದರು. ಚಿತ್ರದ ಮುಹೂರ್ತ, ಡಬ್ಬಿಂಗ್ ಮತ್ತು ಚಿತ್ರೀಕರಣದ ಕೆಲಸಗಳನ್ನು ಮುಗಿಸಿದ ನಂತರವೂ ಮಹೇಶ್‌ಗೆ ಸಂಭಾವನೆ ನೀಡಲಾಗಿಲ್ಲ ಎಂದು ಆರೋಪಿಸಲಾಗಿದೆ. ಚಿತ್ರವು ರಿಲೀಸ್ ಆಗಿದ್ದರೂ, ಪೇಮೆಂಟ್ ಕ್ಲಿಯರ್ ಮಾಡದಿರುವುದರಿಂದ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹೇಶ್ ಅವರು ತಮ್ಮ ವಿಡಿಯೋದಲ್ಲಿ, ಪುಷ್ಪ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ನಿರ್ದೇಶಕ ಶ್ರೀರಾಜ್ ಅವರು ಪ್ರೊಡಕ್ಷನ್ ಕಡೆಯಿಂದ ಪೇಮೆಂಟ್ ಬಂದಿಲ್ಲ ಎಂದು ಹೇಳಿದ್ದಾರೆ. ಇನ್ನು ಮಹೇಶ್ ಗುರು ಫೇಸ್ಬುಕ್‌ನಲ್ಲಿ ಹಾಕಿದ್ದ ವಿಡಿಯೋ ವೈರಲ್ ಆಗಿದ್ದು, ಕೆಲವೇ ಹೊತ್ತಲ್ಲಿ ವೀಡಿಯೋ ಡಿಲೀಟ್ ಆಗಿದೆ.. ಹೀಗಾಗಿ ಮಹೇಶ್ ಗುರು ನಡೆ ಚರ್ಚೆಗೆ ಗ್ರಾಸವಾಗಿದೆ..


