ರಾಜಕೀಯರಾಜ್ಯಸುದ್ದಿ

ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಸಚಿವರಿಗೆ ಕೋಕ್: ನಾವು ಮಾತಾಡಿದಷ್ಟು ಪಕ್ಷಕ್ಕೆ ಡ್ಯಾಮೇಜ್- ರಾಮಲಿಂಗಾ ರೆಡ್ಡಿ

ರಾಮನಗರ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಸಚಿವರಿಗೆ ಕೋಕ್ ಕೊಡುವ ವಿಚಾರ ಕುರಿತು ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ಧಾರೆ.. ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ ವಿಚಾರ ಯಾವುದನ್ನೂ ನಾನು ಮಾತನಾಡಲ್ಲ. ನಾವು ಮಾತನಾಡಿದಷ್ಟು ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂದು ಹೇಳಿದ್ದಾರೆ.. ರಾಮನಗರದಲ್ಲಿ ಮಾತನಾಡಿದ ಅವರು,

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಸಚಿವರಿಗೆ ಕೋಕ್ ಕೊಡುವ ವಿಚಾರದ ಬಗ್ಗೆ ಯಾರು ಏನು ಮಾತನಾಡಿದ್ದಾರೋ ಗೊತ್ತಿಲ್ಲ. ಎಲ್ಲರಿಗೂ ಸೇರಿ ಹೇಳ್ತೀನಿ, ಮಾತನಾಡಿದಷ್ಟು ಪಕ್ಷಕ್ಕೆ ಹಾನಿ. ಸಾಧ್ಯವಾದಷ್ಟು ಎಲ್ಲರೂ ಸೈಲೆಂಟ್ ಆಗಿ ಇರಿ. ಬಿಜೆಪಿಯಲ್ಲಿರುವಷ್ಟು ಬಣ ನಮ್ಮಲ್ಲಿ ಇಲ್ಲ. ನಮ್ಮಲ್ಲಿ ಏನೇ ಇದ್ದರೂ ನಾಲ್ಕು ಗೋಡೆ ಮಧ್ಯೆ ಚರ್ಚೆ ಮಾಡಬೇಕು. ಮಾಧ್ಯಮಗಳ ಮುಂದೆ ಮಾತನಾಡಿದ್ರೆ ವಿಪಕ್ಷಗಳಿಗೆ ಆಹಾರ ಆಗುತ್ತೇವೆ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದ್ದಾರೆ.

ಇನ್ನೂ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಕ್ಕೆ ಹೈಕೋರ್ಟ್ ತಡೆ ವಿಚಾರ ಕುರಿತು ಮಾತನಾಡಿ, ಸರ್ಕಾರದ ಸರ್ಕ್ಯುಲರ್ ಮೇಲೆ ಕೋರ್ಟ್ ಆದೇಶ ಮಾಡಿದೆ. ಮುಖ್ಯಮಂತ್ರಿಗಳು ಅಪೀಲ್ ಹಾಕುತ್ತೇವೆ ಅಂತ ಹೇಳಿದ್ದಾರೆ. ಇದು ಹೊಸದಾಗಿ ನಾವು ಮಾಡಿರುವ ಕಾನೂನು ಅಲ್ಲ. ಹಿಂದೆ ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿ ಮಾಡಿದ್ದ ಆದೇಶ. ಶಾಲಾ, ಕಾಲೇಜು ಆವರಣದಲ್ಲಿ ಯಾವುದೇ ಕಾರ್ಯಕ್ರಮ ಮಾಡಬಾರದು ಅಂತ ಮಾಡಿದ್ದರು. ಇದು ಎಲ್ಲಾ ಪಕ್ಷಗಳು, ಎಲ್ಲಾ ಸಂಘಸಂಸ್ಥೆಗಳಿಗೂ ಅನ್ವಯ ಆಗುತ್ತದೆ ಎಂದು ತಿಳಿಸಿದರು.

Comments (0)

Your email address will not be published. Required fields are marked *

Back to top button